ರಿಷಬ್ ಪಂತ್ ಅಪಘಾತ ಪ್ರಕರಣ; ಮೊಣಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿ!

ಮುಂಬೈ: ಇತ್ತೀಚಿಗೆ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟಿಗ ರಿಷಬ್ ಪಂತ್ ಗೆ ಶನಿವಾರ ಮುಂಬೈನಲ್ಲಿ ಯಶಸ್ವಿ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ವಾರ ನಡೆದ ಭೀಕರ ಕಾರು ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಭಾರತದ ವಿಕೆಟ್‌ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಮುಂಬೈ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ರಿಷಭ್ ಪಂತ್ ಅವರು ಶುಕ್ರವಾರದಂದು ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.ಅವರು ಈಗ ವೈದ್ಯಕೀಯ ಚಿಕಿತ್ಸೆಯಲ್ಲಿದ್ದಾರೆ.ಮುಂದಿನ ಕ್ರಮ ಮತ್ತು ಪುನರ್ವಸತಿಯನ್ನು ಡಾ ದಿನ್ಶಾ ಪರ್ದಿವಾಲಾ ಮತ್ತು ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ಔಷಧ ತಂಡವು ವಹಿಸಲಿದೆ ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಸ್ಪೋರ್ಟ್ಸ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥ ಮತ್ತು ಆರ್ತ್ರೋಸ್ಕೊಪಿ ಮತ್ತು ಭುಜದ ಸೇವೆಯ ನಿರ್ದೇಶಕ ಡಾ ಪಾರ್ದಿವಾಲಾ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು.

ಪಂತ್ ಅವರು ವಾಣಿಜ್ಯ ವಿಮಾನಯಾನದಿಂದ ಹಾರುವ ಸ್ಥಿತಿಯಲ್ಲಿಲ್ಲದ ಕಾರಣ ಡೆಹ್ರಾಡೂನ್‌ನಿಂದ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಕರೆದೊಯ್ಯಲಾಗಿತ್ತು. ಡಿಸೆಂಬರ್ 30 ರ ಮುಂಜಾನೆ ದೆಹಲಿಯಿಂದ ರೂರ್ಕಿಗೆ ಚಾಲನೆ ಮಾಡುತ್ತಿದ್ದ 25 ವರ್ಷದ ರಿಶಬ್ ಪಂತ್, ಈ ವೇಳೆ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ನಂತರ ಅವರು ಗಂಭೀರವಾಗಿ ಗಾಯಗೊಂಡಿದ್ದರು.

Latest Indian news

Popular Stories