ವಿಶ್ವದ ನಂ.1 ಟೆಸ್ಟ್ ತಂಡವಾಗಿ ಹೊರಹೊಮ್ಮಿದ ಭಾರತ ; ಎಲ್ಲಾ ಸ್ವರೂಪಗಳಲ್ಲೂ ಅಗ್ರಸ್ಥಾನ

ನವದೆಹಲಿ : ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂತ್ರ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನ ಭದ್ರಪಡಿಸಿಕೊಂಡಿದೆ.

ಇದರ ಪರಿಣಾಮವಾಗಿ, ಅವರು ಈಗ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳ ಮೂರೂ ಸ್ವರೂಪಗಳಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ತಂಡವಾಗಿದೆ.

ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಪಡೆ 115 ಅಂಕಗಳನ್ನ ಗಳಿಸಿದ್ದು, ಎರಡನೇ ಸ್ಥಾನದಲ್ಲಿರುವ ಆಸೀಸ್ ಗಿಂತ 4 ಅಂಕ ಮುಂದಿದೆ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಪ್ರಸ್ತುತ 106 ಅಂಕಗಳನ್ನ ಗಳಿಸಿದೆ. ಆದ್ರೆ, ಫೆಬ್ರವರಿ 16 ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈ ಗೆಲುವಿನೊಂದಿಗೆ ಭಾರತದ ಸ್ಪಿನ್ ಜೋಡಿಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಮ್ಮ ಬೌಲಿಂಗ್’ಗೆ ಸಹಾಯ ಮಾಡಿದ ಪಿಚ್’ನಲ್ಲಿ ಪ್ರಭಾವಶಾಲಿ ಸ್ಪೆಲ್ಗಳೊಂದಿಗೆ ತಮ್ಮ ಶ್ರೇಯಾಂಕವನ್ನ ಭಾರಿ ಪ್ರಮಾಣದಲ್ಲಿ ಸುಧಾರಿಸಿದರು.

ಅಶ್ವಿನ್ ಎರಡನೇ ಇನ್ನಿಂಗ್ಸ್’ನಲ್ಲಿ 5/37 ವಿಕೆಟ್ ಪಡೆದು 42 ರನ್’ಗೆ 3 ವಿಕೆಟ್ ಪಡೆದರು. ಪ್ರಸ್ತುತ, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ರ್ಯಾಂಕಿಂಗ್’ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅಶ್ವಿನ್ ಕೇವಲ 21 ರೇಟಿಂಗ್ ಪಾಯಿಂಟ್ಸ್ ಹಿಂದಿದ್ದಾರೆ.

ಐಸಿಸಿ ಅಧಿಕೃತ ವೆಬ್ಸೈಟ್ ಪ್ರಕಾರ, ವೆಸ್ಟ್ ಇಂಡೀಸ್ನ ಉದಯೋನ್ಮುಖ ಸ್ಪಿನ್ನರ್ ಗುಡಕೇಶ್ ಮೋಟಿ ಜಿಂಬಾಬ್ವೆ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ 19 ವಿಕೆಟ್’ಗಳನ್ನ ಪಡೆದಿದ್ದಾರೆ. ಇನ್ನು ಕೇವಲ ಮೂರು ಟೆಸ್ಟ್ಗಳ ನಂತರ 77 ಸ್ಥಾನ ಮೇಲಕ್ಕೇರಿ 46ನೇ ಸ್ಥಾನದಲ್ಲಿದ್ದಾರೆ. ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಶತಕ ಬಾರಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಲಗೈ ಬ್ಯಾಟ್ಸ್ಮನ್ 10ನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಜಿಗಿದಿದ್ದಾರೆ.

Latest Indian news

Popular Stories