5ನೇ ಟೆಸ್ಟ್: 2ನೇ ಇನ್ನಿಂಗ್ಸ್ ನಲ್ಲಿ ಭಾರತ 245 ರನ್ ಗೆ ಆಲೌಟ್. ಇಂಗ್ಲೆಂಡ್ ಗೆ 378 ರನ್ ಗುರಿ ನೀಡಿದ ಟೀಂ ಇಂಡಿಯಾ!

ಬರ್ಮಿಂಗ್ಹ್ಯಾಮ್: ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 245 ರನ್ ಗಳಿಗೆ ಆಲೌಟ್ ಆಗಿದ್ದು ಇಂಗ್ಲೆಂಡ್ ಗೆ ಗೆಲ್ಲಲು 378 ರನ್ ಗಳ ಗುರಿ ನೀಡಿದೆ. 

ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ಟೀಂ ಇಂಡಿಯಾ 245 ರನ್ ಗಳಿಗೆ ಸರ್ವಪತನ ಕಂಡಿದೆ. ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 66, ವಿರಾಟ್ ಕೊಹ್ಲಿ 20, ರಿಷಬ್ ಪಂತ್ 57, ಶ್ರೇಯಸ್ ಅಯ್ಯರ್ 19, ರವೀಂದ್ರ ಜಡೇಜಾ 23 ರನ್ ಗಳಿಸಿದ್ದಾರೆ. 

ಇನ್ನು ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಬೆನ್ ಸ್ಟೋಕ್ಸ್ 4, ಬ್ರಾಡ್ ಮತ್ತು ಪೋಟ್ಸ್ ತಲಾ 2 ವಿಕೆಟ್ ಹಾಗೂ ಲೀಚ್, ಆಂಡ್ರ್ಯೂಸನ್ ತಲಾ 1 ವಿಕೆಟ್ ಪಡೆದಿದ್ದಾರೆ. 

ಟೀಂ ಇಂಡಿಯಾ ನೀಡಿದ 378 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿದ್ದು 3 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿದ್ದು ಗೆಲ್ಲಲು 241 ರನ್ ಗಳ ಗುರಿ ಮುಟ್ಟಬೇಕಿದೆ.

Latest Indian news

Popular Stories