ಬೆನೋನಿ(ದಕ್ಷಿಣ ಆಫ್ರಿಕಾ): ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 79 ರನ್ ಗಳಿಂದ ಸೋಲು ಅನುಭವಿಸಿದೆ.
ಬೆನೋನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ 174 ರನ್ ಗಳಿಗೆ ಆಲೌಟ್ ಆಗಿದ್ದು 79 ರನ್ ಗಳಿಂದ ಪರಾಭವಗೊಂಡಿದೆ.
ಭಾರತದ ಪರ ಆದರ್ಶ್ ಸಿಂಗ್ 47, ಮುಷೀರ್ ಖಾನ್ 22, ಮುರುಗನ್ ಅಭಿಷೇಕ್ 42 ಮತ್ತು ನಮನ್ ತಿವಾರಿ ಅಜೇಯ 14 ರನ್ ಪೇರಿಸಿದ್ದಾರೆ. ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಮಾಹ್ಲಿ ಬಿಯರ್ಡ್ಮನ್ ರಾಫ್ ಮ್ಯಾಕ್‌ಮಿಲನ್ ತಲಾ 3 ವಿಕೆಟ್ ಪಡೆದರೆ ಕ್ಯಾಲಮ್ ವಿಡ್ಲರ್ 2 ವಿಕೆಟ್ ಪಡೆದಿದ್ದಾರೆ.
ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿ 64 ಎಸೆತಗಳಲ್ಲಿ 3 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ಭಾರತೀಯ ಬೌಲರ್‌ಗಳಿಗೆ ಕಂಟಕವಾದರು. ಪರಿಣಾಮ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 253 ರನ್ ಸಿಡಿಸಲು ನೆರವಾಯಿತು. ಆಸ್ಟ್ರೇಲಿಯಾ ಪರ ಹ್ಯಾರಿ ಡಿಕ್ಸನ್ 42, ಹಗ್ ವೈಬ್ಜೆನ್ 48 ಮತ್ತು ಒಲಿವರ್ ಪೀಕ್ ಅಜೇಯ 46 ರನ್ ಬಾರಿಸಿದ್ದಾರೆ. ಇನ್ನು ಭಾರತ ಪರ ರಾಜ್ ಲಿಂಬನಿ 3, ನಮನ್ ತಿವಾರಿ 2 ಮತ್ತು ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.