ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್: 280 ರನ್ ಗಳಿಂದ ಭಾರತ ಗೆಲುವು!

ಚೆನ್ನೈ: ಹಿರಿಯ ಆಫ್ ಸ್ಪೀನ್ನರ್ ಆರ್. ಅಶ್ವಿನ್ ಅವರ ಆರು ವಿಕೆಟ್ ಹಾಗೂ ಅನುಪಮ ಆಲ್ ರೌಂಡರ್ ಆಟದೊಂದಿಗೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಭಾನುವಾರ 280 ರನ್ ಗಳಿಂದ ಗೆಲುವು ಸಾಧಿಸಿದ್ದು, ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 515 ರನ್‌ಗಳ ಅಸಂಭವ ಗುರಿ ಹೊಂದಿದ್ದ ಬಾಂಗ್ಲಾದೇಶ 234 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ್ದ ಅಶ್ವಿನ್ 6 ವಿಕೆಟ್ ಕಬಳಿಸುವ ಮೂಲಕ ಚೆಪಾಕ್‌ನಲ್ಲಿರುವ ತವರು ಮೈದಾನದಲ್ಲಿ ಎದುರಾಳಿ ಬಾಂಗ್ಲಾದೇಶಕ್ಕೆ ತುಂಬಾ ಹಾನಿಯನ್ನುಂಟು ಮಾಡಿದರು.

ಉಳಿದಂತೆ ರವೀಂದ್ರ ಜಡೇಜಾ ಮೂರು ವಿಕೆಟ್ ಕಬಳಿಸಿದರು. ಬಾಂಗ್ಲಾದೇಶದ ಪರ ನಾಯಕ ನಜ್ಮುಲ್ ಹೊಸೈನ್ ಶಾಂಟೊ 127 ಎಸೆತಗಳಲ್ಲಿ 82 ರನ್ ಗಳಿಸಿದದ್ದು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.

ಮೂರನೇ ದಿನದಂದು ಮಂದಗತಿಯ ಬೆಳಕಿನಿಂದ ಆಟ ಸ್ಥಗಿತಗೊಂಡಾಗ ಬಾಂಗ್ಲಾದೇಶದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 158 ಆಗಿತ್ತು. ರಿಷಭ್ ಪಂತ್ (109) ಮತ್ತು ಶುಭಮನ್ ಗಿಲ್ (119) ಅವರ ಅವಳಿ ಶತಕಗಳ ನೆರವಿನಿಂದ ಭಾರತ 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಒಟ್ಟಾರೆ 514 ರನ್‌ಗಳ ಮುನ್ನಡೆ ಸಾಧಿಸಿತ್ತು.

Latest Indian news

Popular Stories