“ಹೀತ್ ಸ್ಟ್ರೀಕ್ ಜೀವಂತ” – ಗೊಂದಲ ಸೃಷ್ಟಿಸಿದ ಹೆನ್ರಿ ಒಲೊಂಗಾ ಪೋಸ್ಟ್

X ನಲ್ಲಿ ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್ ಅವರ ಮರಣವನ್ನು ಘೋಷಿಸಿದ ಗಂಟೆಗಳ ನಂತರ, ಅವರ ಮಾಜಿ ಸಹ ಆಟಗಾರ ಹೆನ್ರಿ ಒಲೊಂಗಾ ಎರಡನೇ ಪೋಸ್ಟ್‌ನಲ್ಲಿ ದಂತಕಥೆ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

ಹೆನ್ರಿ ಒಲೊಂಗಾ ತನ್ನ ಹೊಸ ಪೋಸ್ಟ್‌ನಲ್ಲಿ “ಸ್ಟ್ರೀಕ್ ಸಾವಿನ ವದಂತಿಗಳು ಬಹಳ ಉತ್ಪ್ರೇಕ್ಷಿತವಾಗಿವೆ”. ಸ್ಟ್ರೀಕ್ ಅವರು ವದಂತಿಯಿಂದ ನೊಂದಿದ್ದಾರೆ ಎಂದು ದೃಢಪಡಿಸಿದರು.

“ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಬಹಳ ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ನಾನು ಅವನಿಂದ ಕೇಳಿದ್ದೇನೆ. ಮೂರನೇ ಅಂಪೈರ್ ಅವರನ್ನು ಮರಳಿ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ” ಎಂದು ಒಲೊಂಗಾ ಅವರ ಹೊಸ ಟ್ವೀಟ್ ನಲ್ಲಿ ಹೇಳಿದ್ದಾರೆ.

ಅವರ ಸಾವಿನ ಕುರಿತು ಮುಖ್ಯವಾಹಿನಿಯ ಎಲ್ಲ ಮಾಧ್ಯಮಗಳು ಸೇರಿದಂತೆ ಹಲವು ಖ್ಯಾತ ನಾಮರು ಟ್ವೀಟ್ ಮಾಡಿದ್ದರು.

Latest Indian news

Popular Stories