ಹೂಡೆ: ಸೂಪರ್ ಸಿಕ್ಸ್ ಗೈಸ್ ಹೂಡೆ ಇದರ ವತಿಯಿಂದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ರಹಮತ್ ಪೆರ್ಲಕಡಿ ಮಾಲಕತ್ವದ ಅರ್ಷಸ್ ಜಾನ್ಸನ್ ಕುಂದಾಪುರ ಫೈನಲ್’ನಲ್ಲಿ ವಿಜೇತರಾಗಿ ಸೂಪರ್ ಸಿಕ್ಸ್ ಪ್ರಶಸ್ತಿಯೊಂದಿಗೆ ಎರಡು ಲಕ್ಷ ಇಪ್ಪತ್ತೆರಡು ಸಾವಿರ ರೂಪಾಯಿಗಳ ನಗದು ಪಡೆದುಕೊಂಡಿತು.
ರನ್ನರ್ಸ್ ಆಗಿ ಶೆಟ್ಟಿ ಎಂಪೈರ್ಸ್ ತಂಡ ಮೂಡಿ ಬಂದಿತು. ಒಂದು ಲಕ್ಷ ಹನ್ನೊಂದು ಸಾವಿರ ನಗದನ್ನು ಬಹುಮಾನವಾಗಿ ಪಡೆದುಕೊಂಡರು.
ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ:
ಅರ್ಥಿಕವಾಗಿ ಹಿಂದುಳಿದವರಿಗೆ ಸೂಪರ್ ಸಿಕ್ಸ್ ಕ್ರಿಕೆಟ್ ಆಯೋಜಕರು ಈ ಪಂದ್ಯಾವಳಿಯಲ್ಲಿ ಉಳಿದ ಹಣದಿಂದ ಧನ ಸಹಾಯ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಿದರು. ಗಾಲಿ ಖುರ್ಚಿ, ಮೆಡಿಕಲ್ ಫಂಡ್ ಸೇರಿದಂತೆ ಆಹಾರ ಧಾನ್ಯಗಳನ್ನು ಒದಗಿಸಿರುವ ಕುರಿತು ಸಂಘಟಕರು ಮಾಹಿತಿ ನೀಡಿದ್ದಾರೆ.
ಸೂಪರ್ ಸಿಕ್ಸ್ ಪಂದ್ಯಾವಳಿಯನ್ನು ಜಿ.ರಫೀಕ್, ಜುನೈದ್ ಹೂಡೆ, ರಹಮತ್ ಪೆರ್ಲಕಡಿ, ಝಕೀರ್ ಹೂಡೆ, ಸಿರಾಜ್ ಕುದುರು, ಅಫ್ತಾಬ್ ಹೂಡೆ ಆಯೋಜಿಸಿದ್ದರು.