4ನೇ ಟೆಸ್ಟ್: ಐದು ವಿಕೆಟ್ ಗಳಿಂದ ಇಂಗ್ಲೆಂಡ್ ಮಣಿಸಿ, ಸರಣಿ ಗೆದ್ದ ಭಾರತ!

ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದ ಭಾರತ, ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನೀಡಿದ್ದ 192 ರನ್ ಗುರಿ ಬೆನ್ನತ್ತಿದ್ದ ಭಾರತದ ಪರ ನಾಯಕ ರೋಹಿತ್ ಶರ್ಮಾ 55, ಶುಭಮನ್ ಗಿಲ್ ಅಜೇಯ 52 ರನ್ ಗಳ ನೆರವಿನಿಂದ ಐದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಉಳಿದಂತೆ ಯಶಸ್ವಿ ಜೈಸ್ವಾಲ್ 37, ಧ್ರುವ್ ಜುರೇಲ್ 39 ರನ್ ಗಳಿಸಿದರು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿನ್ನು ಭಾರತ 3-1 ಅಂತರದಿಂದ ಕೈ ವಶ ಮಾಡಿಕೊಂಡಿತು.

ಮೊದಲನೇ ಇನ್ನಿಂಗ್ಸ್ ನಲ್ಲಿ 46 ರ್ ಗಳ ಮುನ್ನಡೆ ಪಡೆದಿದ್ದ ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಸ್ಪೀನರ್ ಗಳಾದ ಆರ್ ಅಶ್ವಿನ್ ಮತ್ತು ಕುಲದೀಪ್ ಯಾದವ್ ಯಶಸ್ವಿಯಾದರು. ಪರಿಣಾಮ ಮೂರನೇ ದಿನವಾದ ಭಾನುವಾರ ಇಂಗ್ಲೆಂಡ್ ಭಾರತಕ್ಕೆ 196 ರನ್ ಗಳ ಟಾರ್ಗೆಟ್ ನೀಡಿತ್ತು. ದಿನದಾಟದ ಅಂತ್ಯಕ್ಯೆ ಭಾರತ ತಂಡ 8 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. ಇಂಗ್ಲೆಂ್

ಇಂದು ಬ್ಯಾಟಿಂಗ್ ಮುಂದುವರೆಸಿದ ತಂಡ ಭೋಜನ ವಿರಾಮಕ್ಕೆ 3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಬಳಿಕ ಮತ್ತೆ ಎರಡು ವಿಕೆಟ್ ಕಳೆದುಕೊಂಡರೂ ನಂತರ ಬಂದ ಬ್ಯಾಟರ್ ಗಳು ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Latest Indian news

Popular Stories