ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಹಾಗೂ ಯುವರಾಜ್ ಸಿಂಗ್ ಅವರ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು ಎನ್ನುವ ಅಭಿಮಾನಿಗಳಿಗೆ ಮತ್ತೊಂದು ಅವಕಾಶವಿದೆ.
ನಾಳೆಯಿಂದ ಆರಂಭವಾಗಲಿರುವ ಚೊಚ್ಚಲ International Masters League 2025 ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇವರಿಬ್ಬರೂ ಭಾರತದ ಪರ ನೀಲಿ ಜೆರ್ಸಿ ಧರಿಸಿ ಮತ್ತೆ ಕಣಕ್ಕಿಳಿಯಲಿದ್ದಾರೆ. ನಾಳೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವು ಶ್ರೀಲಂಕಾ ಮಾಸ್ಟರ್ಸ್ ತಂಡವನ್ನು ಎದುರಿಸಲಿದೆ.
ನವಿ ಮುಂಬೈಯಲ್ಲಿ ರಾತ್ರಿ 7-30 ಕ್ಕೆ ಪಂದ್ಯ ಆರಂಭವಾಗಲಿದ್ದು, ಇಂಗ್ಲೆಂಡ್, ಶ್ರೀಲಂಕಾ, ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸುವ ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 16 ರಂದು ರಾಯಪುರದಲ್ಲಿ ನಡೆಯಲಿದೆ.
ಇಂಡಿಯಾ ಮಾಸ್ಟರ್ಸ್ ತಂಡ ಇಂತಿದೆ: ಸಚಿನ್ ತೆಂಡೊಲ್ಕರ್ (ನಾಯಕ) ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಧವಳ್ ಕುಲಕರ್ಣಿ, ವಿನಯ್ ಕುಮಾರ್, ಶಹಬಾಜ್ ನದೀಂ, ರಾಹುಲ್ ಶರ್ಮಾ, ನಮನ್ ಓಜಾ, ಪವನ್ ನೇಗಿ, ಗುರ್ ಕೀರಾತ್ ಸಿಂಗ್ ಮಾನ್, ಅಭಿಮನ್ಯು, ಮಿಥುನ್ ಮತ್ತು ಸೌರಭ್ ತಿವಾರಿ
ಇಂಟರ್ ನ್ಯಾಷನಲ್ ಮಾಸ್ಟರ್ಸ್ ಲೀಗ್ ನ ಪಂದ್ಯಗಳು, ದಿನಾಂಕದ ಮಾಹಿತಿ ಈ ಕೆಳಗಿನಂತಿದೆ.