ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ – ವಾಸ್ತವಿಕತೆ ಏನು ಗೊತ್ತಾ?

ಮುಂಬೈ: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಟಿ20 ವಿಶ್ವಕಪ್ ಗೆ ಅಂತ್ಯವಾಗುವ ಕಾರಣದಿಂದ ಹೊಸ ಕೋಚ್ ನೇಮಕಕ್ಕೆ ಬಿಸಿಸಿಐ ಮುಂದಾಗಿದೆ. ಅದಕ್ಕಾಗಿ ಅರ್ಜಿ ಕೂಡಾ ಆಹ್ವಾನ ಮಾಡಿದೆ.

ಆದರೆ ಕೋಚ್‌ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ, ಸಚಿನ್‌ ತೆಂಡುಲ್ಕರ್‌, ಎಂ.ಎಸ್‌.ಧೋನಿ, ನಟ ಶಾರುಖ್‌ ಖಾನ್‌ ಹೆಸರಲ್ಲೂ ಅರ್ಜಿಗಳು ಸಲ್ಲಿಕೆಯಾಗಿವೆ! ಆದರೆ ಇದೆಲ್ಲಾ ನಕಲಿ.

ಮೇ 27ಕ್ಕೆ ಅರ್ಜಿ ಸಲ್ಲಿಸಲು ಗಡುವು ಮುಗಿದ ಮೇಲೆ ಒಟ್ಟು 3000 ಅರ್ಜಿಗಳು ಬಂದಿವೆ, ಅದರಲ್ಲಿ ಬಹುತೇಕ ನಕಲಿ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಈ ಹಿಂದೆ ಅರ್ಜಿ ಕರೆದಿದ್ದಾಗಲೂ ಇಂತಹ ಘಟನೆಗಳು ನಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹರ್ಭಜನ್‌ ಸಿಂಗ್‌, ವೀರೇಂದ್ರ ಸೆಹವಾಗ್‌ ಹೆಸರುಗಳು ನಕಲಿ ಅರ್ಜಿದಾರರಲ್ಲಿ ಸೇರಿವೆ. 2022ರಲ್ಲಿ ಬಿಸಿಸಿಐ ಅರ್ಜಿ ಕರೆದಿದ್ದಾಗ ನಕಲಿ ಅರ್ಜಿಗಳ ಸಂಖ್ಯೆಯೇ 5000 ಇದ್ದವು.

ಇತ್ತೀಚೆಗಷ್ಟೇ ಕೆಕೆಆರ್ ಐಪಿಎಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಮುಂದಿನ ಕೋಚ್ ಆಗುವುದು ಬಹುತೇಕ ಅಂತಿಮ ಎನ್ನಲಾಗಿದೆ.
ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌ ಆಯ್ಕೆಯಾಗಿದ್ದಾರೆ, ಅಧಿಕೃತ ಘೋಷಣೆಯಷ್ಟೇ ಬಾಕಿ ಎಂದು ಮೂಲಗಳು ಹೇಳಿವೆ. ಐಪಿಎಲ್‌ ಫ್ರಾಂಚೈಸಿಯೊಂದರ ಅತಿ ಪ್ರಭಾವಿ ಮಾಲಿಕರೊಬ್ಬರು ಈ ಮಾಹಿತಿ ನೀಡಿದ್ದಾರೆಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಫ್ರಾಂಚೈಸಿಯ ಪ್ರಭಾವಿ ಮಾಲಿಕ, “ಗೌತಮ್‌ ಗಂಭೀರ್‌ ಕೋಚ್‌ ಆಗುವ ಒಪ್ಪಂದ ನಡೆದಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ’ ಎಂದಿದ್ದಾರಂತೆ. ಹಾಗೆಯೇ ಪ್ರಭಾವಿ ವೀಕ್ಷಕ ವಿವರಣೆಕಾರರೊಬ್ಬರು ಕೋಲ್ಕತ ಮೆಂಟರ್‌ ಅನ್ನು ಒಳಕ್ಕೆ ತರಲು ಗಂಭೀರ ಯತ್ನ ಸಾಗಿದೆ ಎಂದಿದ್ದಾರೆ.

Latest Indian news

Popular Stories