ಕನ್ನಡ ಹಬ್ಬ ಒಂದು ಜಾತಿ ಧರ್ಮಕ್ಕೆ ಸೀಮಿತ ವಾಗಬಾರದು – ಬಿಜೆಪಿ ಎಮ್.ಎಲ್.ಸಿ ಎಚ್.ವಿಶ್ವನಾಥ್ ಅಸಮಾಧಾನ

ಕನ್ನಡ ಹಬ್ಬ ಒಂದು ಜಾತಿ ಧರ್ಮಕ್ಕೆ ಸೀಮಿತ ವಾಗಬಾರದು.ಹಾವೇರಿಯಲ್ಲಿ ನ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಆಳುವ ಪಕ್ಷವನ್ನು ಓಲೈಸುವ ಕಾರ್ಯಕ್ರಮವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ಬಹುತ್ವದ ವಿರುದ್ಧವಾಗಿದೆ.ಮೈಸೂರು ಮಹಾರಾಜರು ಪ್ರಾರಂಭಿಸಿದ ಕನ್ನಡ ಹಬ್ಬಕ್ಕೆ
ಜಾತಿ ಧರ್ಮ ಪಂಗಡಗಳ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ.20 ಕೋಟಿ ನೀಡಿ ಸರಕಾರ ಸಮ್ಮೇಳನದ ಬಗ್ಗೆ ಯಾವುದೇ ಸಂಬಂದ ಇಲ್ಲದಂತೆ ವರ್ತಿಸುತ್ತಿದೆ. 85 ಜನ ಸನ್ಮಾನಿತರಲ್ಲಿ ಓರ್ವ ಮುಸ್ಲಿಮರ ಹೆಸರು ಇಲ್ಲ.ಸಿ.ಎಂ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮ್ಮೇಳನವು ಕನ್ನಡಿಗರ ಹೃದಯಕ್ಕೆ ಬರೆ ಹಾಕಲಾಗುತ್ತಿದೆ. ಕನ್ನಡ ಲೇಖಕರು,ಸಾಹಿತಿಗಳು,ಮಹಿಳಾ ಲೇಖಕಿಯರುಗಳನ್ನು ಕಡೆಗಣಿಸಿಲಾಗಿದೆ ಆರೋಪಿಸಿದ್ದಾರೆ.

70 ಲಕ್ಷ ಜನ ಕನ್ನಡಿಗರು ಮುಸ್ಲಿಮರ ಇದ್ದರೂ ಅವರನ್ನು ಯಾವ ಆಧಾರದ ಮೇಲೆ ಕಡೆಗಣಿಸಲಾಗಿದೆ ಎಂದು ಸರಕಾರ ಉತ್ತರಿಸಬೇಕು.ಸುಮಾರು 14 ಲಕ್ಷ ಕನ್ನಡ ಬ್ಯಾರಿ ಬಾಷಿಕರು ಇದನ್ನು ಬಲವಾಗಿ ಖಂಡಿಸುವುದರೊಂದಿಗೆ ಸಮ್ಮೇಳನವನ್ನು ಬಹಿಷ್ಕರಿಸಬೇಕು ಎಂದು ಹೇಳಿದ್ದಾರೆ.

Latest Indian news

Popular Stories