ವಿಜಯಪುರ: ಜೆಡಿಎಸ್ ಜಿಲ್ಲಾಧ್ಯಕ್ಷರ ಮೇಲೆ ಅಸಮಾಧಾನ ಮುಂದುವರೆದಿದ್ದು, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಪುನ: ಪತ್ರಿಕಾಗೋಷ್ಠೀ ನಡೆಸಿ ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನವನ್ನು ಮತ್ತೆ ಬಹಿರಂಗವಾಗಿ ತೋಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್ ಕೂಪರ್, ಜೆಡಿಎಸ್ ನಮ್ಮ ಹೆಮ್ಮೆ, ನಮ್ಮ ನಾಯಕರು ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳೆನ್ನದೇ ಶ್ರಮಿಸುತ್ತಿದಾರೆ, ಆದರೆ ಜೆಡಿಎಸ್ ಜಿಲ್ಲಾಧ್ಯಕ್ಷರು ಮಾತ್ರ ಈ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ, ಕೇವಲ ಗೊಂದಲವನ್ನುಂಟು ಮಾಡುವದರಿಂದ ಜಿಲ್ಲೆಯಲ್ಲಿ ಜನರು ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ಬಿತ್ತುವಲ್ಲಿ ತೊಡಗಿರುವುದು ನೋವಿನ ಸಂಗತಿ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷರು ವರಿಷ್ಠರ ಮೂಲಕ ಯಾವದೇ ಸಂದೇಶ ರವಾನಿಸದೆ ಪೂರ್ವಾಗ್ರಹ ಪೀಡಿತರಾಗಿ ಪದಾಧಿಕಾರಿಗಳ ಕುರಿತು ಅಸಮಾಧಾನ ಹೊರ ಹಾಕಿದ್ದು ಹಾಸ್ಯಾಸ್ಪದ ಸಂಗತಿ. ನಾವೂ ಈಗಲೂ ಪಕ್ಷದ ಅಜೀವ ಸದಸ್ಯರಿದ್ದೇವೆ. ಪಕ್ಷದ ಏಳ್ಗೆಗೆ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದರು.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಲ್ಲಿ ಕೆಲವೊಂದು ವಾರ್ಡಗಳಲ್ಲಿ ಬಿ' ಫಾರ್ಮಗಳು ಜಿಲ್ಲೆಯ ಪದಾಧಿಕಾರಿಗಳಿಗೆ ಕೊಟ್ಟಿದ್ದರು. ಆದರೆ ಕೆಲವೊಬ್ಬರು ನಾಮಿನೇಷನ ಮಾಡದೇ ಮನೆಯಲ್ಲಿ
ಬಿ’ ಫಾರ್ಮ ಇಟ್ಟುಕೊಂಡವರನ್ನು ಪಕ್ಕದಲ್ಲಿಟ್ಟುಕೊಂಡು ಸಂರಕ್ಷಣೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷನಾಗಿ ನನಗೆ ಒಂದು “ಬಿ” ಫಾರ್ಮ ಕೊಡಬೇಕಾದರೆ ನನ್ನ ರಾಜೀನಾಮೆಯ ಕರಾರು ಮಾಡಿ ನೀಡಿದರು. ಅದೇ ರೀತಿ ಬೇರೆ ಪದಾಧಿಕಾರಿಗಳಿಗೆ ಬಿ' ಫಾರ್ಮ ನೀಡಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು ಒಳಗೊಂಡಂತೆ ಅವರೆಲ್ಲರೂ ಕೂಡಿಕೊಂಡು ಪಕ್ಷದ
ಬಿ’ ಫಾರ್ಮಗಳನ್ನು ಹೊಂದಾಣಿಕೆ ಮಾಡಿಕೊಂಡು ಬಚ್ಚಿಟ್ಟು, ಬಿಜೆಪಿ ಗೆಲ್ಲುವಂತೆ ಮಾಡಿದ್ದಾರೆ ಎಂದು ದೂರಿದರು.
ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷ ದಸ್ತಗೀರ ಸಾಲೋಟಗಿ ಮಾತನಾಡಿ, ನಾವು ಈ ಹಿಂದೆ ಮಾಧ್ಯಮ ಗೋಷ್ಠಿಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಗೆ ಒಂದು ಅಲ್ಪ ಸಂಖ್ಯಾತರ ಅಭ್ಯರ್ಥಿಯನ್ನು ಘೋಷಿಷಲು ರಾಜ್ಯ ನಾಯಕರಿಗೆ ವಿನಂತಿಸಿಕೊಂಡಿದ್ದೇವು, ಅದನ್ನು ಪಕ್ಷ ವಿರೋಧ ಚಟುವಟಿಕೆ ಎಂದು ಪರಿಗಣಿಸುವದು ಸರಿಯಲ್ಲ. ನಾವು ಅಲ್ಪ ಸಂಖ್ಯಾತರ ಘಟಕದಿಂದ ಪತ್ರಿಕಾ ಗೋಷ್ಠಿ ಮಾಡಿ ಜಿಲ್ಲಾಧ್ಯಕ್ಷರ ಕುರಿತು ಸಮಜಾಯಿಸಿ ಗಮನಕ್ಕೆ ತಂದಿದ್ದೇವೆ. ಆದರೆ ಪಕ್ಷದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದೆ ರಾಜ್ಯ ನಾಯಕರಿಗೆ ವಿನಂತಿಸಿಕೊಂಡಿದ್ದೇವೆ. ಅದನ್ನು ಪಕ್ಷ ವಿರೋಧ ಚಟುವಟಿಕೆ ಎಂದು 3 ಜನರನ್ನು ಉಚ್ಛಾಟನೆ ಮಾಡಿದರು. ಆದರೆ ಮಹಿಳಾ ಘಟಕದ 4 ಜನ ಮಹಿಳೆಯರು ಮಾಧ್ಯಮಗೋಷ್ಠಿ ಮಾಡಿ ಅವರಲ್ಲಿ ಕೇವಲ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಿಗೆ ಮಾತ್ರ ಉಚ್ಛಾಟನೆ ಮಾಡಿದ್ದಾರೆ ಎಂದರು.
ನಗರ ಘಟಕದ ಅಧ್ಯಕ್ಷ ಡಾ.ಶಮಶೇರ್ ಅಲಿ ಮುಲ್ಲಾ ಮಾತನಾಡಿದರು. ಕಾರ್ಯಾಧ್ಯಕ್ಷ ಜಾಕೀರಹುಸೇನ ಲಾಹೋರಿ ಪತ್ರಿಕಾಗೋಷ್ಠಿಯಲ್ಲಿ ಉಪ್ಪಸ್ಥಿತರಿದ್ದರು.