ವಿಜಯಪುರ: ಟಿಪ್ಪು ಸುಲ್ತಾನ್ ಕೂಡ ಓರ್ವ ದೇಶದ ಭಕ್ತ. ಅದಕ್ಕಾಗಿ ನಾವು ಟಿಪ್ಪುವನ್ನು ಗೌರವಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಜಯಪುರದಲ್ಲಿ ರವಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪುನನ್ನ ಆರಾಧನೆ ಮಾಡುವ ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದಿದ್ದ ಕೇಂದ್ರ ಸಚಿವ ಅಮಿತ್ ಶಾಗೆ ಟಾಂಗ್ ನೀಡಿದ ಅವರು, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರರು ಅಂತಾ ಶ್ರದ್ಧೆ, ಭಕ್ತಿ ಗೌರವಿಸುತ್ತೇವೆ. ಬಿಜೆಪಿಗರು ಗೊಡ್ಸೆ ಪೂಜೆ ಮಾಡುವವರು. ಅವರೇನು ನಮಗೆ ಪಾಠ ಮಾಡ್ತಾರೆ. ಮಹಾತ್ಮ ಗಾಂಧಿ ಕೊಂದವರನ್ನು ಪೂಜಿಸುವರನ್ನು ಏನು ಮಾಡಬೇಕು. ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮಾಡಿದವನು ನಾನು ಎಂದರು.
ಅಲ್ಲದೇ, ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ ಆಗಿದೆ. ಕಾಂಗ್ರೆಸ್ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ಬಿಜೆಪಿ ಸಂವಿಧಾನ ನಂಬಿಕೆ, ಗೌರವ ಇಲ್ಲದಂತಹವರು. ಸಂವಿಧಾನಕ್ಕೆ ವಿರುದ್ದವಾಗಿರುವಂತಹ ಪಕ್ಷ ಆಗಿದೆ ಎಂದು ವಾಗ್ದಾಳಿ ಮಾಡಿದರು.
ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ. ಇವರಿಬ್ಬರು ಸೇರಿ ಸರ್ಕಾರ ಮಾಡಿದ್ದರಲ್ಲ. ಅದೆಂಗೆ ಒಂದಾಗಲಿಕ್ಕೆ ಆಗತ್ತದೆ ಎಂದರು.