ತಕ್ಷಣದಿಂದಲೇ ಶಿಕ್ಷಕರ ಕೌನ್ಸೆಲಿಂಗ್‌ ಆರಂಭ: ಶಿಕ್ಷಣ ಸಚಿವ

ಬೆಂಗಳೂರು: ಆರೇಳು ತಿಂಗಳಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮಂಗಳವಾರ ಮಧ್ಯಾಹ್ನ ಚಾಲನೆ ದೊರೆತಿದ್ದು, ತಕ್ಷಣದಿಂದಲೇ ಕೌನ್ಸೆಲಿಂಗ್‌ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳವಾರ ಈ ಮಾಹಿತಿ ನೀಡಿದ್ದಾರೆ. ಪುನಾರಂಭದ ಬಗ್ಗೆ ಬಹಳ ಒತ್ತಡ ಇದ್ದ ಕಾರಣದಿಂದ ತಕ್ಷಣವೇ ಕೌನ್ಸೆಲಿಂಗ್‌ ಪ್ರಾರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳಂ ಭಾಷೆ ಮಾತನಾಡುವ ಶಿಕ್ಷಕಿ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿ ಅಧಿಕಾರಿ ವರ್ಗದವರಿಗೆ ಸೂಚಿಸಿ ಸರಿಪಡಿಸುತ್ತೇವೆ. ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೇವೆ. ಪೋಷಕರು ಮನಸ್ಸಿಗೆ ಬೇಸರ ಮಾಡಿಕೊಂಡಿದ್ದಾರೆ. ಕನ್ನಡ ಪಾಠ ಮುಂದುವರಿಸುವ ಕೆಲಸ ಮಾಡುತ್ತೇವೆ ಎಂದರು.

Latest Indian news

Popular Stories