ಯಶವಂತಪುರ: “ಧರ್ಮವು ಸಮಾಜದಲ್ಲಿ ಮನುಷ್ಯರನ್ನು ಒಗ್ಗೂಡಿಸಿ ಪರಸ್ಪರರೊಂದಿಗೆ ಬೆರೆತು ಬಾಳುವುದನ್ನು ಕಲಿಸುತ್ತದೆ, ಅದೇ ವೇಳೆ ಅಧರ್ಮವು ಜನರನ್ನು ಪರಸ್ಪರ ದ್ವೇಷಿಸುವಂತೆ ಮಾಡುತ್ತದೆ, ಸಮಾಜದಲ್ಲಿ ಜನರ ಮಧ್ಯೆ ಒಡಕನ್ನುಂಟು ಮಾಡಿ ಸಂಶಯ ಗೋಡೆಗಳನ್ನು ನಿರ್ಮಿಸುವವರೆ ಧರ್ಮ ದ್ರೋಹಿಗಳು, ಧರ್ಮದ ತಿಳುವಳಿಕೆ ಮೂಡಿಸುವಂತಹ ಇಂತಹ ಕಾರ್ಯಕ್ರಮಗಳು ರಾಜ್ಯದ ಮೂಲೆಮೂಲೆಗೂ ತಲುಪಲಿ” ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.
ಅವರು ಇಲ್ಲಿಯ ಉಮರ್ ಫಾರೂಕ್ ಮಸೀದಿ ವತಿಯಿಂದ ಎಂ.ಎಸ್ ಪಾಳ್ಯ ದಲ್ಲಿ ಹಮ್ಮಿಕೊಂಡಂತಹ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಿಯಾಝ್ ಅಹ್ಮದ್, ಸಹ ಕಾರ್ಯದರ್ಶಿ, ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮದ ಧ್ಯೇಯ ಮತ್ತು ಉದ್ದೇಶವನ್ನು ವಿವರಿಸಿದರು.
ಗೌಸ್ ಮುಹಿಯುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
ಸುಹೈಲ್ ಅಹ್ಮದ್ ಸ್ಥಾನೀಯ ಅಧ್ಯಕ್ಷರು ಜ.ಇ.ಹಿಂದ್ ಯಶವಂತಪುರ, ರಿಯಾಝ್ ಅಹ್ಮದ್, ಅಧ್ಯಕ್ಷರು ಉಮರ್ ಫಾರೂಕ್ ಮಸ್ಜಿದ್, ಮುಂತಾದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.