ವಿಜಯಪುರ: ನನಗೆ ಯಾವುದೇ ನೋಟೀಸ್ ಬಂದಿಲ್ಲ. ಸುಮ್ಮನೆ ಊಹಾಪೋಹ ಹರಡಿಸಿದ್ದಾರೆ ಎಂದು ವಿಜಯಪುರದಲ್ಲಿ ಸೋಮವಾರ ಮಾಧ್ಯಮದ ಎದುರು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ಪಷ್ಟನೆ ನೀಡಿದರು.
ನಾನು ನೋಟೀಸ್ ಕೊಡುವಂತಹ ಯಾವುದೇ ಪಕ್ಷದ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು, ವಂಶಪಾರಂಪರೆ ರಾಜಕೀಯ ಮುಂದುವರೆಸುವ ಬಗ್ಗೆ ಮಾತನಾಡಿದ್ದೇನೆ. ನನಗೆ ನೋಟೀಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಯತ್ನಾಳ್ ಇಷ್ಟೆಲ್ಲ ಮಾತನಾಡಿದ್ದಾನೆ ನೋಟೀಸ್ ಯಾಕೆ ನೀಡಿಲ್ಲ ಅಂತಾ ಕೆಲವರಿಗೆ ಕಾಡುತ್ತಿದೆ. ಇದೆಲ್ಲ ರಾಜಕೀಯ ವಿರೋಧಿಗಳ ಷಡ್ಯಂತ್ರ ಅಷ್ಟೆ ಎಂದರು.
ಅಲ್ಲದೇ, ಯಾವ ಭಯಕ್ಕೂ ಅಂಜುವ ಮಗ ನಾನಲ್ಲ. ನಿನ್ನೆ ವರಿಷ್ಠರೇ ಮಾತನಾಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿಯಲ್ಲೆ ಬಹುದೊಡ್ಡ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮುಂದಿನ ಚುನಾವಣೆಗಳ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಮಾಡುವ ಸಾಧ್ಯತೆ ಇವೆ. ನನ್ನ ಪರವಾಗಿಯು ಒಳ್ಳೆಯ ನಿರ್ಣಯ ಆಗಲಿದೆ ಎಂದರು.