ಪ್ರಚೋದನಾತ್ಮಕ ಭಾಷಣ : ಶರಣ್ ಗಡಿಪಾರಿಗೆ ಆಗ್ರಹ

ಬೆಂಗಳೂರು : ಸಮಾಜದಲ್ಲಿನ ಶಾಂತಿ ಸೌಹಾರ್ದತೆ ಹದಗೆಡಿಸುವ ನಿಟ್ಟಿನಲ್ಲಿ ಪ್ರಚೋನಾತ್ಮಕ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವಕೇಟ್ ತಾಹೇರ್ ಹುಸೇನ್ ಆಗ್ರಹಿಸಿದರು.

ತುಮಕೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟ ಪಂಪ್ ವೆಲ್ ನ ವಿರುದ್ಧ ಕೇಸ್ ದಾಖಲಾಗಬೇಕು. ಮುಂದಿನ ದಿನಗಳಲ್ಲಿ ತುಮಕೂರು ಹಿಂದುತ್ವದ ಫ್ಯಾಕ್ಟರಿ ಆಗುತ್ತೆ. ಒಬ್ಬನನ್ನು ಮುತ್ತಿದ್ರೆ ನಿಮ್ಮಲ್ಲಿ ಹತ್ತು ಮಂದಿ ಆಸ್ಪತ್ರೆಯಲ್ಲಿರ್ತಾರೆ. ನಮ್ಮ ಕೈಯಲ್ಲಿ ರಾಡ್ ಬದಲಿಗೆ ತಲ್ವಾರ್ ಇರುತ್ತೆ. ಮನೆಗೆ ನುಗ್ಗಿ ಹೊಡೆಯುತ್ತವೆ ಎನ್ನುವ ಪ್ರಚೋನಾತ್ಮಕ ಭಾಷಣವನ್ನು ಬಹಿರಂಗ ವೇದಿಕೆಯಲ್ಲಿ ಮಾಡುವ ಮೂಲಕ ಸಮಾಜದಲ್ಲಿ ನೆಲೆಸಿರುವ ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಯತ್ನಿಸುತ್ತಿರುವ ಈತನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

Latest Indian news

Popular Stories