ಬೂದಿಹಾಳ ಪೀರಾಪುರ ಯೋಜನೆ: ಸಿಎಂ ಬೊಮ್ಮಾಯಿ ಅವರಿಗೆ ನಾಚಿಕೆಯಾಗಬೇಕು: ಎಂಬಿ ಪಾಟೀಲ ವಾಗ್ದಾಳಿ

ವಿಜಯಪುರ: ಬೂದಿಹಾಳ ಪೀರಾಪುರ ಯೋಜನೆ ನಮ್ಮ ಪಕ್ಷದ ಯೋಜನೆ ಆಗಿದೆ ಅದನ್ನು ಬಿಜೆಪಿಯವರು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ ಸಿಎಂ ಬೊಮ್ಮಾಯಿ ಅವರಿಗೆ ನಾಚಿಕೆಯಾಗಬೇಕು ಎಂದು ಬಿಜೆಪಿ ಹಾಗೂ ಸಿಎಂ ಬೊಮ್ಮಾಯಿ ವಿರುದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂಬಿ ಪಾಟೀಲ ವಾಗ್ದಾಳಿ ನಡೆಸಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶೇ. 99ರಷ್ಟು ಡ್ಯಾಮ್ ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಹಾಗೂ ರಾಜ್ಯದಲ್ಲಿರುವ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ನಿರ್ಮಿಸಿದ್ದು ಕಾಂಗ್ರೆಸ್ ಪಕ್ಷ, ಪ್ರಧಾನಿ ಮೋದಿ ಅವರು ಏನು ಮಾಡಿಲ್ಲ, ನಾವು ಕಟ್ಟಿರುವುದನ್ನೆಲ್ಲ ಮಾರುತ್ತಿದ್ದಾರೆ ಎಂದರು.
ಮೋದಿ ಅವರು ಅಧಿಕಾರಕ್ಕೆ ಬಂದರೆ ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು. ಇದು ವರೆಗೆ ಕಪ್ಪು ಹಣ ಬಂತಾ? ಇನ್ನು ಎಲ್ಲರಿಗೂ 15 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದರು ಯಾರಿಗಾದರೂ ಆ ಹಣ ಬಂದಿದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.
ಇನ್ನು ಬಿಜೆಪಿ, ಆರ್ಎಸ್ಎಸ್, ವಿಶ್ವಹಿಂದು ಪರಿಷತ್ ನವರು ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಕುಟುಕಿದರು.
ಪ್ರಜಾಧ್ವನಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಮ್ಮ ಪಕ್ಷದ ಸಾಧನೆಗಳನ್ನು ಹಾಗೂ ಬಿಜೆಪಿಯ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದೇವೆ ಇದು ಜನರ ಧ್ವನಿ – ನಿಮ್ಮ ಧ್ವನಿ ಎಂದರು.