ಮಡಿಕೇರಿ: ಬೃಹತ್ ಮರದ ದಿಮ್ಮಿ ಸಾಗಿಸುತ್ತಿದ್ದಾಗ ತುಂಡಾದ ಹಗ್ಗ; ಜೀಪ್ ಒಳಗೆ ನುಗ್ಗಿದ ದಿಮ್ಮಿ!

ಮಡಿಕೇರಿ, ಜ.29: ಸಂಪಾಜೆ ಸಮೀಪದ ಜೋಡುಪಾಲದಲ್ಲಿ ಜೀಪ್‌ನ ಬೃಹತ್ ಮರದ ದಿಮ್ಮಿ ಜಾರಿ ಲಾರಿಯೊಂದರಿಂದ ಬಿದ್ದು ಜೀಪಿನ ಕ್ಯಾಬಿನ್‌ನ ಒಳಗೆ ಪ್ರವೇಶಿಸಿದ್ದರಿಂದ ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶುಕ್ರವಾರ ರಾತ್ರಿ 14 ಚಕ್ರಗಳ ಲಾರಿಯೊಂದು ಬೃಹತ್ ಮರದ ದಿಮ್ಮಿಗಳನ್ನು ಮಂಗಳೂರಿಗೆ ಸಾಗಿಸುತ್ತಿತ್ತು. ಜೋಡುಪಾಲ ಬಳಿ ಮರದ ದಿಮ್ಮಿಗಳಿಗೆ ಕಟ್ಟಿದ್ದ ಹಗ್ಗ ತುಂಡಾಗಿದ್ದರಿಂದ ಮರದ ದಿಮ್ಮಿಗಳು ರಸ್ತೆಗೆ ಉರುಳಿವೆ.

ಜೋಡುಪಾಲದಿಂದ ಮದೆನಾಡು ಕಡೆಗೆ ಹೋಗುತ್ತಿದ್ದ ಜೀಪಿನ ಗಾಜುಗಳಲ್ಲಿ ಮರದ ದಿಮ್ಮಿಯೊಂದು ಹಾರಿ ಬಂದು ಚುಚ್ಚಿದೆ. ಅದೃಷ್ಟವಶಾತ್ ಚಾಲಕನಿಗೆ ತಾಗಲಿಲ್ಲ. ಜೀಪ್‌ಗೆ ತೀವ್ರ ಹಾನಿಯಾಗಿದೆ. ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories