ಮಾಜಿ ಶಾಸಕ ರಾಜು ಆಲಗೂರಗೆ ತಪ್ಪಿದ ಕೈ ಟಿಕೇಟ್: ಧರಣಿ

ವಿಜಯಪುರ : ದಲಿತ ಸಮುದಾಯದ ಪ್ರೊ.ರಾಜು ಆಲಗೂರ ಅವರಿಗೆ ನಾಗಠಾಣ ವಿಧಾನಸಭಾ ಕ್ಷೇತ್ರದ ಟಿಕೇಟ್ ಕೈ ತಪ್ಪಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ನೇತೃತ್ವದಲ್ಲಿ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮುಂಭಾಗದಲ್ಲಿ ಧರಣಿ ನಡೆಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ,ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಎಂಬ ಮಧ್ಯಮಗಳಲ್ಲಿ ಇಂದಿನವರೆಗೆ ಬಲಗೈ ಸಮುದಾಯ ಕಾಂಗ್ರೇಸಿನ ನಿಷ್ಟಾವಂತ ಪ್ರಸಾರ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಸುಮಾರು ಮೂರುವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ ಚಲವಾದಿ ಬಲಗೈ ಸಮಾಜ ಇದೆ. ಕಾಂಗ್ರೆಸ್ ಕೂಡ ಇಲ್ಲಿಯವರೆಗೆ ಬಲಗೈ ಸಲುವಾಗಿ ಸಹಾಯ ಸಹಕಾರ ಮಾಡುತ್ತ ಬಂದಿದೆ ಇದರಲ್ಲಿ ಯಾವ ಸಂಶಯವಿಲ್ಲ. ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ನಾಗಠಾಣ ವಿಧಾನಸಭಾ ಕ್ಷೇತ್ರವಾಗಿದೆ. ಬಬಲೇಶ್ವರ ಮತಕ್ಷೇತ್ರದ ಶಾಸಕರು ಎಂ.ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆಯ ಉತ್ಕೃಷ್ಟ ರಾಜಕಾರಿಣಿ ಯಾಗಿದ್ದಾರೆ. ಅವರ ಅವಧಿಯಲ್ಲಿ ಸ್ವತಃ ಅವರೆ ರಾಜು ಆಲಗೂರ ಅವರನ್ನು ರಾಜಕಿಯಕ್ಕೆ ತಂದು ರಾಜಕೀಯದಲ್ಲಿ ಎಲ್ಲ ಅವಕಾಶಗಳನ್ನು ಒದಗಿಸಿದವರು. ಆದರೆ ಈಗ ಆಲಗೂರ ಅವರಿಗೆ ಟಿಕೇಟ್ ಕೈ ತಪ್ಪಿರುವುದು ಸಮಾಜ ಬಾಂಧವರಿಗೆ ನೋವು ತರಿಸಿದೆ ಎಂದರು.

ಅನೇಕ ಅವಕಾಶಗಳು ಬಂದರೂ ಸಹ ಪ್ರೊ. ರಾಜು ಆಲಗೂರ ಅವರು ಕಾಂಗ್ರೇಸ್ ಪಕ್ಷದ ನಿಷ್ಟೆಯಿಂದ ಪಕ್ಷಾಂತರಗೊಳ್ಳಲು ಮನಸ್ಸು ಮಾಡಲಿಲ್ಲ ಇದರಿಂದ ಅಲಗೂರ ಅವರ ಪಕ್ಷನಿಷ್ಠೆ ಪ್ರಮಾಣಿಕತೆ ಹಾಗೂ ಎಂ.ಬಿ. ಪಾಟೀಲ ಅವರ ಮೇಲಿಟ್ಟ ವಿಶ್ವಾಸದಿಂದ ಅವಕಾಶವಾದಿಯಾಗಲಿಲ್ಲ. ಆದ್ದರಿಂದ ಇಂಥ ಕಾಂಗ್ರೇಸ್ ನಿಷ್ಠಾವಂತ ಪ್ರಮಾಣಿಕ ವ್ಯಕ್ತಿಗೆ ಪಕ್ಷದಿಂದ ಅನ್ಯಾಯವಾಗಬಾರದು, ನಾಗಠಾಣ ಮತಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಿ ಬಲಗೈಯ ಸಮುದಾಯಕ್ಕೆ ರಾಜಕೀಯ ನ್ಯಾಯವನ್ನು ಒದಗಿಸಿಕೊಡಬೇಕು ಎಂದರು.

ಪ್ರಮುಖರಾದ ಮಹಾಂತೇಶ ಸಾಸಬಾಳ, ರೇವಣಸಿದ್ದ ಮಸಳಿಕೇರಿ, ಅವಿನಾಶ ಬಾಣಿಕೋಲ, ರಾಮ ದೊಡಮನಿ, ವಿನೋದ ನಾಗಾವಿ, ಶರಣು ಮಾದರ, ಅರುಣ ಗವಾರಿ, ಪ್ರಶಾಂತ ತೊರವಿ, ಭೀಮರಾಯ ನಡಗೇರಿ, ಚೈತನಕುಮಾರ ರಾಯಣ್ಣವರ, ಶರಣು ಚಲವಾದಿ, ಪರಸರಾಮ ಬೆಕಿನಾಳ, ಪವನ ಮೇಲಿನಕೇರಿ, ಕೆದಾರಿ ಹರಿಜನ ಪ್ರಶಾಂತ ದೊಡಮನಿ, ಶಂಕರ ಇವಣಗಿ, ದುಂಡಪ್ಪ ನಾಟೀಕಾರ, ಅತುಲ ಗಾಯಕವಾಡ, ಸುನೀಲ ಆಳುರ ಉಪಸ್ಥಿತರಿದ್ದರು.

Latest Indian news

Popular Stories