ಸಚಿವ ಡಾ|ಸಿ ಎನ್ ಅಶ್ವತ್ಥ್ ನಾರಾಯಣ್ ಅವರ ವಿರುದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು – ಕೆ.ಕೃಷ್ಣ ಮೂರ್ತಿ

ಉಡುಪಿ : ರಾಜ್ಯದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎನ್ನುವ ಮೂಲಕ ಪ್ರಚೋದನಾತ್ಮಕವಾಗಿ ಮಾತನಾಡಿದ ಸಚಿವ ಡಾ|ಸಿ ಎನ್ ಅಶ್ವತ್ಥ್ ನಾರಾಯಣ್ ಅವರ ವಿರುದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಹಾಗೂ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿ
ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಕೆ ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 5 ವರ್ಷ ಯಶಸ್ವಿಯಾಗಿ ಸಂಪೂರ್ಣ ಜನಪರ ಆಡಳಿತ ನೀಡಿರುವ ಹಿರಿಯ ರಾಜಕಾರಣಿ ಸರ್ವಧರ್ಮೀಯರ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಸಚಿವ ಡಾ|ಸಿ ಎನ್ ಅಶ್ವತ್ಥ್ ನಾರಾಯಣ್ ಮಾತನಾಡಿದ ಪದಗಳನ್ನು ಯಾರೂ ಕೂಡ ಒಪ್ಪುವಂತದಲ್ಲ. ಬಿಜೆಪಿ ಪಕ್ಷದವರು ಏನೇ ಮಾತನಾಡಿದರೂ ನಡೆಯುತ್ತದೆ ಎಂಬ ಅಹಂಕಾರದ ವರ್ತನೆ ಅವರ ಮಾತುಗಳಲ್ಲಿ ಪದೇ ಪದೇ ಎದ್ದು ಕಾಣುತ್ತದೆ . ರಾಜಕೀಯ ವಿಚಾರಗಳಲ್ಲಿ ಪರ ವಿರೋಧ ಮಾಡುವುದನ್ನು ಬಿಟ್ಟು ಹೊಡೆದು ಸಾಯಿಸಿ ಎಂಬ ಪ್ರಚೋದನಾತ್ಮಕ ಪದ ಬಳಸಿರುವುದು ಅವರ ಪಕ್ಷದ ಸಿದ್ಧಾಂತ ಹಾಗೂ ಅವರ ಕ್ರೂರ
ಮನಸ್ಥಿತಿ ಎದ್ದು ಕಣುತ್ತದೆ ಎಂದು ಆಕ್ರೋಶ ಹೊರ ಹಾಕಿದರು.

ಸಿದ್ದರಾಮಯ್ಯ ನವರು ಬರಿ ಒಂದು ಸಮುದಾಯಕ್ಕೆ ಒಂದು ಜಾತಿಗೆ ಮಾತ್ರ ಸೀಮಿತವಾದ ನಾಯಕರಲ್ಲ ಅವರೊಬ್ಬರು ಸರ್ವಧರ್ಮೀಯರ ನಾಯಕರು ಅವರು ಅನೇಕ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ನಿಗಮಗಳನ್ನು ಮಾಡಿದ್ದಾರೆ ಅನೇಕ ಮಹಾಪುರುಷರ ಜಯಂತಿ ಗಳನ್ನು ಮಾಡಿದರೆ ಅದೇ ರೀತಿ ರಾಜ್ಯ ದಲ್ಲಿ ಅತೀ ಹೆಚ್ಚು ಜನಪರ ಬಜೆಟ್ ಮಂಡಿಸಿದ ನಾಯಕರು ಪ್ರಣಾಲಿಕೆ ಯಲ್ಲಿ ಕೊಟ್ಟ ಭರವಸೆ ಯನ್ನು ನುಡಿದಂತೆ ನಡೆದ ಸರ್ವಧರ್ಮೀಯರ ಅಚ್ಚುಮೆಚ್ಚಿನ ಭಾಗ್ಯಗಳ ಸರದಾರ ಎಂದು ಹೆಸರುವಾಸಿಯಾದರು ಈ ಬಾರಿ ರಾಜ್ಯದಲ್ಲಿ ಜನರ ಒಲವು ಕಾಂಗ್ರೆಸ್ ಪರ ವಾಗಿದೆ ಎಂದು ಹತಾಶರಾಗಿ ಬಾಯಿಗೆ ಬಂದಂತೆ ರಸ್ತೆ ಬದಿಯಲ್ಲಿ ಪುಂಡು ಪೂಕಾರಿಗಳ ರೀತಿ ಒಬ್ಬ ಸಚಿವ ರಾಗಿ ಮಾತನಾಡುತ್ತಿದ್ದರೆ ಇದು ಇವರಿಗೆ ಶೋಭೆ ತರುವುದಿಲ್ಲ

ಒಮ್ಮೆ ಬಾಯಿಗೆ ಬಂದಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿ ಬಳಿಕ ಕ್ಷಮೆ ಕೇಳುವ ಡ್ರಾಮಾ ಮಾಡಿದರೆ ಅವರು ಆಡಿದ ಕ್ರೂರ ಮನಸ್ಥಿತಿಯುಳ್ಳ
ಮಾತು ಮರೆತು ಹೋಗುವುದಿಲ್ಲ. ಒಬ್ಬ ಸಚಿವರಾಗಿ ಇಂತಹ ಹೇಳಿಕೆ ನೀಡಿದ ಅಶ್ವಥ್ ನಾರಾಯಣ್ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Latest Indian news

Popular Stories