ಸಿಎಂ ಕೇಜ್ರಿವಾಲ್ ಗೆ ಶಾಕ್: ಎಎಪಿ ತೊರೆದು ಬಿಜೆಪಿ ಸೇರಲು ಭಾಸ್ಕರ್ ರಾವ್ ನಿರ್ಧಾರ

ಬೆಂಗಳೂರು: ಮಾರ್ಚ್ 4ರಂದು ರಾಜ್ಯಕ್ಕೆ ಎಎಪಿ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಆಗಮಿಸುತ್ತಿದ್ದು ಇದಕ್ಕೂ ಮೊದಲೆ ಅವರಿಗೆ ಶಾಕ್ ನೀಡಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಎಎಪಿಗೆ ಗುಡ್ ಬೈ ಹೇಳಿದ್ದಾರೆ.

ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷ ಸೇರಿದ್ದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ನಾಳೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. 

ಇಂದು ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿ ಮಾಡಿದ ಬಾಸ್ಕರ್ ರಾವ್ ಅವರು ನಂತರ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವು ನಾಯಕ ಜೊತೆ ಮಾತುಕತೆ ನಡೆಸಿದರು.

ಭಾಸ್ಕರ್ ರಾವ್ ಅವರು ಎಎಪಿ ಪಕ್ಷದಿಂದ ಬಸವನಗುಡಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಅವರ ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಅಚ್ಚರಿ ಮೂಡಿಸಿದೆ. 

Latest Indian news

Popular Stories