ಬೆಂಗಳೂರು : ರಾಜ್ಯಾದ್ಯಂತ ಸಂಚರಿಸೋ ಕೆಎಸ್‌ಆರ್‌ಟಿಸಿ ಬಸ್ಸಿನಿಂದಲೇ ಅಪಘಾತ ಪ್ರಕರಣ ಹೆಚ್ಚಾಗಿದ್ದು, ಈ ಬೆನ್ನಲ್ಲೆ ನಿಯಮಗಳನ್ನು ಬಿಗಿಗೊಳಿಸಲು ಹೊಸ ಸುತ್ತೋಲೆ ಹೊರಡಿಸಿದೆ ಎಂದು ವರದಿಯಾಗಿದೆ.
ದೇಶದಲ್ಲೇ ಅತ್ಯುತ್ತಮ ಸಂಪರ್ಕ ಸಾರಿಗೆ ಎಂಬ ಹೆಗ್ಗಲಿಕೆಗೆ ಕೆಎಸ್‌ಆರ್‌ಟಿಸಿ ಬಸ್ ಪಾತ್ರವಾಗಿದ್ದು, ಅಪಘಾತಗಳು ಹೆಚ್ಚಾಗುತ್ತಿರೋದ್ರಿಂದ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು, ಅಪ್ಪಿತಪ್ಪಿ ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸ ಸುತ್ತೋಲೆ ಮೂಲಕ ಖಡಕ್ ವಾರ್ನಿಂಗ್ ನನ್ನು ಹೊರಡಿಸಲಾಗಿದೆ.ಅದರಲ್ಲೂ ಇತ್ತೀಚಿಗೆ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಚತುಷ್ಪತ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ನಡೆಸುತ್ತಿದ್ದು, ಅಲ್ಲದೇ ಜನರು ತಪ್ಪಾದ ಲೈನ್ನಲ್ಲಿ ಇಳಿಸುತ್ತಿದ್ದಾರೆ ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರೋದ್ರಿಂದ ಈಗಾಗಲೇ ನಿಮಗಕ್ಕೆ ಖಾಸಗಿ ವಾಹನ ಸವಾರರು ನಿಗಮಕ್ಕೆ ದೂರು ನೀಡಿದ್ದಾರೆ.
ಈ ಕಾರಣದಿಂದಾಗಿ ಹೊಸ ಸುತ್ತೋಲೆ ಹೊರಡಿಸಿ, ಚಾಲಕರ ನಿಯಮಗಳನ್ನು ಕಠಿಣಗೊಳಿಸಲಾಗಿದೆ.