ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಪದವಿ ಕಾಲೇಜಿ ಪದವಿ ಮುಗಿಸಿದ ಐವರು ಮಹಿಳೆಯರು ಸ್ನಾತಕೋತ್ತರ ವ್ಯಾಸಂಗಕ್ಕೆ ಉಚಿತವಾಗಿ ಯು.ಕೆ ಗೆ ತೆರಳುವ ಚಿವೆನಿಂಗ್ ಕಾರ್ಯಕ್ರಮಕ್ಕೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಬೆಳಗಾವಿ ಸುವರ್ಣಸಿೌದದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಮ್ ಸಿ ಸುಧಾಕರ್ ಅವರು,ಕಠಿಣ ಅಭ್ಯಾಸದ ಮೂಲಕ ವಿದ್ಯಾರ್ಥಿನಿಯರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಅವಕಾಶ ಪಡೆಯುವ ಮಹತ್ವದ ಕಾರ್ಯಕ್ರಮವಿದು ಎಂದರು.
2025-2026 ರಲ್ಲಿ ಮೊದಲ ತಂಡ ತೆರಳಲಿದ್ದು, ಯು.ಕೆ ಯ ಯಾವೊದೇ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಅಧ್ಯಯನ ನಡೆಸ ಬಹುದಾಗಿದೆ.ಇದಕ್ಕಾಗಿ 40 ಲಕ್ಷ ಖರ್ಚಾಗಲಿದ್ದು ಸರ್ಕಾರ ಹಾಗು ಬ್ರಿಟಿಷ್ ಕೌನ್ಸಿಲ್ ತಲಾ 20ಲಕ್ಷ ವ್ಯಯಮಾಡಲಿವೆ ಎಂದರು.
ಸದ್ಯ ಮೂರು ವರ್ಷಗಳಿಗೆ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ವರ್ಷ ಐದಕ್ಕಿಂತ ಹೆಚ್ಚು ವಿದ್ಯಾರ್ಥಿ ನಿಯರನ್ನು ಕಳುಹಿಸುವ ಬಗ್ಗೆ ಯೂ ಮಾತುಕತೆ ನಡೆದಿದೆ ಎಂದರು.
ಈ ಅವಕಾಶದಿಂದ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಹೆಚ್ಚು ಅಧ್ಯಯನ ಮಾಡುವ ಅವಕಾಶ ಸಿಗಲಿದ್ದು , ಈ ಅವಕಾಶ ಪಡೆಯಲು ಕಠಿಣ ಶ್ರಮ , ಅಧ್ಯಯನ ಮುಖ್ಯ . ಕಠಿಣ ಸ್ಪರ್ಧೆಯು ಇರುತ್ತದೆ ಎಂದರು.ವಿದ್ಯಾರ್ಥಿನಿಯರು ಇದರ ಅವಕಾಶ ಪಡೆದು ಶೈಕ್ಷಣಿಕ ವಾಗಿ ಉನ್ನತ ಮಾನ್ಯತೆ ಪಡೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿ ಗೆ ಕೌಶಲ್ಯಾಧಾರಿತ ಶಿಕ್ಷಣ ಕಲ್ಪಿಸುವತ್ತ ರಾಜ್ಯ ಉನ್ನತ ಶಿಕ್ಷಣ ಇಲಾಖಿೆ ಹಲವಾರು ಮಹತ್ವದ ಹೆಜ್ಜೆ ಯಿಟ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಿಟಿಷ್ ಕೌನ್ಸಿಲ್ ನ ಭಾರತೀಯ ಹೈಕಮಿಷನರ್ (ಕೆರಳ , ಕರ್ನಾಟಕ ಸೆಕ್ಟರ್ ನ )ಚಂದ್ರು ಅಯ್ಯರ್ ,ಕರ್ನಾಟಕ ಸೆಕ್ಟರ್ ನ ಡೆಪ್ಯುಟಿ ಹೆಡ್ ಆಫ್ ಕಮಿಷನರ್ ಜೇಮ್ಸ ಗಾಡ್ಬರ್ ,ಹೆಡ್ ಆಫ್ ಚಿವನಿಂಗ್ ಸ್ಕಾಲರ್ ಷಿಪ್ ಸುಪ್ರಿಯಾ ಚಾವ್ಲ ಹಾಗೂ ರಾಜ್ಯ ಅರ್ಥಿಕ ಹಾಗು ಮುಖ್ಯ ಮಂತ್ರಿಗಳ . ಹೆಚ್ಚುವರಿ ಕಾರ್ಯದರ್ಶಿ ಅತೀಕ್ , ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್ , ಕಾಲೇಜು ಹಾಗು ತಾಂತ್ರಿಕ ಇಲಾಖೆ ಆಯುಕ್ತರಾದ ಮಂಜುಶ್ರೀ ಹಾಜರಿದ್ದರು.