CM ಸಿದ್ದು, ಡಿಕೆಶಿ ಕರ್ನಾಟಕದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದ್ದಂತೆ: ವಚನಾನಂದ ಶ್ರೀ

ಚಿತ್ರದುರ್ಗ: ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ. ಶಿವಕುಮಾರ್‌(DK Shivakumar) ಕರ್ನಾಟಕದ ರೋಹಿತ್‌ ಶರ್ಮಾ(Rohit Sharma) ಹಾಗೂ ವಿರಾಟ್‌ ಕೊಹ್ಲಿ(Virat Kohli) ಇದ್ದಂತೆ. ರೋಹಿತ್‌ ಹಾಗೂ ಕೊಹ್ಲಿ ಇಬ್ಬರೂ ಸೇರಿ ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಇವರಿಬ್ಬರೂ ಸೇರಿ ಉತ್ತಮ ಆಡಳಿತ ನಡೆಸಲಿ ಎಂದು ಹರಿಹರ ಪಂಚಮಸಾಲಿ ಗುರುಪೀಠ ವಚನಾನಂದ ಸ್ವಾಮೀಜಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಸಿಎಂ ಬದಲಾವಣೆ ಈಗ ಅಪ್ರಸ್ತುತ. ಈಗಾಗಲೇ ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್‌ ಡಿಸಿಎಂ ಆಗಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಇನ್ನೂ ಉತ್ತಮ ಆಡಳಿತ ಕೊಡಲಿ ಎಂದು ಹಾರೈಸುತ್ತೇವೆ ಎಂದರು.

ಬೆಂಗಳೂರಿನ ಚಂದ್ರಶೇಖರ ಸ್ವಾಮೀಜಿ ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಿ ಎಂದಿದ್ದಾರೆ. ಆದರೆ ಅದು ಹೈಕಮಾಂಡ್‌ ಚಿಂತನೆ ಮಾಡಬೇಕಾದ ವಿಚಾರ. ಕಾಂಗ್ರೆಸ್‌ ಪಕ್ಷಕ್ಕೆ ಅದರದ್ದೇ ಆದ ಸಿದ್ಧಾಂತವಿದೆ. ಮುಂದೆ ಡಿಕೆಶಿ ಸಿಎಂ ಆಗಬಹುದು. ದಲಿತ ನಾಯಕರಾದ ಡಾ| ಜಿ. ಪರಮೇಶ್ವರ್‌, ಸತೀಶ ಜಾರಕಿಹೊಳಿ ಅಂಥವರಿಗೂ ಅವಕಾಶ ಸಿಗಬೇಕು. ಎಲ್ಲವನ್ನೂ ಯೋಚನೆ ಮಾಡಿದಾಗ ಮುಂದೆ ಲಿಂಗಾಯತರು ಮುಖ್ಯಮಂತ್ರಿ ಆಗುವ ಯೋಗ ಬಂದೇ ಬರುತ್ತದೆ ಎಂದರು.

Latest Indian news

Popular Stories