ಕಾರವಾರ: ಉತ್ತರ ಕನ್ನಡ ಮೊಗವೀರರಿಗೆ ಪರಿಶಿಷ್ಟ ರೆಂದು ಜೆ.ಸಿ.ಪ್ರಕಾಶ್ ನೀಡಿದ ವರದಿ ಅಸಂವಿಧಾನಿಕ ಎಂದು ದಲಿತ ಮುಖಂಡ ತುಳಸಿದಾಸ ಪಾವುಸ್ಕರ್ ಹೇಳಿದರು .
ಕಾರವಾರದ ಪತ್ರಿಕಾಭವನದಲ್ಲಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಜೆ.ಸಿ.ಪ್ರಕಾಶ್ ಸಮಿತಿಗೆ ಯಾವುದೇ ಮಾನ್ಯತೆ ಇಲ್ಲ. ಅವರು ಕೊಟ್ಟ ವರದಿ ರಾಜ್ಯ ಸರ್ಕಾರ ಅಂಗೀಕರಿಸಿದರೆ , ನಾಳೆ ಕಾರವಾರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸುತ್ತಿದ್ದು, ಅವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಮುಖಂಡರ ಎಚ್ಚರಿಕೆ ನೀಡಿದರು.
ಸಚಿವ ವೈದ್ಯ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಉತ್ತರ ಕನ್ನಡ ಮೊಗೇರರು ಪರಿಶಿಷ್ಟರಲ್ಲ ಎಂದು ಎಚ್ .ಕೆ.ಭಟ್ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿ ಅಂಗೀಕಾರವಾಗಿದೆ. ಈ ವರದಿ ಆಧರಿಸಿ ಜಿಲ್ಲಾಡಳಿತ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದಾರೆ .ಅಲ್ಲದೇ ಮೊಗೇರರಿಗೆ ಪ್ರವರ್ಗ ಒಂದರಲ್ಲಿ ನೂರಾರು ಜನರಿಗೆ ಪ್ರಮಾಣ ಪತ್ರ ನೀಡಿ, ನೌಕರಿ ಸಹ ಪಡೆದಿದ್ದಾರೆ. ಹಾಗಾಗಿ ಮೊಗೇರರು ದಲಿತರಲ್ಲ ಎಂದು ಎಲ್ಲರಿಗೂ ಗೊತ್ತು ಎಂದು ಪಾವುಸ್ಕರ ಹೇಳಿದರು .
ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಮೊಗೇರರು. ಅವರು ಸಹ ಜಿಲ್ಲಾ ಪಂಚಾಯತ ಸದಸ್ಯರಿದ್ದಾಗ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದರು. ಆದರೆ ಸಚಿವರಾದ ಹಿಂದುಳಿದ ವರ್ಗ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹಾದಿ ತಪ್ಪಿಸುತ್ತಿದ್ದಾರೆ ಎಂದು ದೀಪಕ್ ಕುಡಾಳಕರ್ ಹೇಳಿದರು.
ದಲಿತರ ಮೇಲೆ ಜಿಲ್ಲೆಯಲ್ಲಿ ದಲಿತರ ಮೇಲೆ ಹೆಚ್ಚು ದೌರ್ಜನ್ಯ ಆಗುತ್ತಿವೆ ಎಂದು ವಕೀಲ ರವೀಂದ್ರ ಆರೋಪಿಸಿದರು.
….