ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯದ ರೈತರನ್ನು ಮಧ್ಯಪ್ರದೇಶದ ಬೋಪಾಲ್ ನಲ್ಲಿ ಬಂಧಿಸಿರುವುದು ಖಂಡನೀಯ.ಇದು ಕೇಂದ್ರ ಸರ್ಕಾರದ ಹತಾಶೆಯ ಕ್ರಮ” ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಅವರು ಮುಂದುವರಿಯುತ್ತಾ ” ರೈತರ ಬೇಡಿಕೆಗಳನ್ನು ಸರಕಾರ ಕೂಡಲೇ ಒಪ್ಪಬೇಕು. ಪ್ರತಿಭಟನೆಗಳು ಕೇಂದ್ರದ ನಿದ್ದೆಗೆಡಿಸಿದೆ. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಶತಾಯಗತಾಯ ಶ್ರಮಿಸುತ್ತಿದೆ ಈಗಾಗಲೇ ಹತ್ತು ವರ್ಷಗಳ ಅವಧಿಯಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿದ್ದಾರೆ. ರೈತರ ಪ್ರಾಣದೊಂದಿಗೆ ಸರಕಾರ ಚೆಲ್ಲಾಟ ವಾಡುದನ್ನು ಕೊಡಲೆ ನಿಲ್ಲಿಸಬೇಕು. ರೈತರ ಈ ಹೋರಾಟಕ್ಕೆ ವೆಲ್ ಫೇರ್ ಪಾರ್ಟಿ ಸಂಪೂರ್ಣವಾಗಿ ಬೆಂಬಲಿಸುತ್ತದೆ. ರೈತರ ಹೋರಾಟದ ಮುಂದೆ ತನ್ನ ಸರ್ವಾಧಿಕಾರಿ ಧೋರಣೆ ಯ ಆಟ ನಡೆಯದು ಎಂದು ಅರಿತಿರುವ ಕೇಂದ್ರ ಸರಕಾರವು ಈ ಸಂಘಟನೆಗಳ ಒಗ್ಗಟ್ಟನ್ನು ಮುರಿಯಲು ಸಂಚು ಹೂಡುತ್ತಲೇ ಇದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರ ಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿಯೇನೆಂಬುದನ್ನು ಜನರು ಅರ್ಥೈಸಬೇಕು. ಎಂದು ಅವರು ಹೇಳಿದರು.