ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರಿಗೆ ಅನ್ಯಾಯ :ವೆಲ್ಫೇರ್ ಪಾರ್ಟಿ

ಬೆಂಗಳೂರು: “ಈ ಬಾರಿಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ. ನುಡಿದಂತೆ ನಡೆದ ಸರಕಾರ ಎಂದು ಬಿಂಬಿಸುತ್ತಿರುವ ಸರಕಾರ ಈ ವಿಚಾರದಲ್ಲಿ ನುಡಿದಂತೆ ನಡೆದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ರವರು ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅವರು ಮಾತನಾಡುತ್ತಾ “ಇತ್ತೀಚೆಗೆ ಅಲ್ಪಸಂಖ್ಯಾತ ಮುಖಂಡರು. ಕಳೆದ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಗಳನ್ನು ಬೇಟಿಯಾಗಿ 5000 ಕೋಟಿ ರೂಪಾಯಿಗಳ ಮಂಜೂರಿಗಾಗಿ ಬೇಡಿಕೆ ನೀಡಿತ್ತು. ಕಳೆದ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ರ ಸ್ಲಮ್ ಕಾಲೊನಿಯ ಅಭಿವೃದ್ಧಿ ಯೋಜನೆಗೆ ಇನ್ನೂರು ಕೋಟಿ ಘೋಶಿಸಿತ್ತು. ಆದರೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಅಲ್ಪಸಂಖ್ಯಾತ ರ ಅಭಿವೃದ್ಧಿ ಗೆ 2101.20ಕೋಟಿ ಘೋಷಿಸಿತ್ತು. ಕಳೆದ ಜನವರಿ 24 ರಂದು
1008ಕೋಟಿ ಬಿಡುಗಡೆ ಮಾಡಿತು. ಆದರೆ ವ್ಯಯವಾದದ್ದು ಕೇವಲ438.86 ಕೋಟಿ ಇನ್ನೂ575 ಕೋಟಿ ಬರಬೇಕಿದೆ.
ಮುಖ್ಯಮಂತ್ರಿ ಗಳ ವಿಶೇಷ ನಿಧಿಯಿಂದ ಅಲ್ಪಸಂಖ್ಯಾತ ರ ಅಭಿವೃದ್ಧಿ ಗೆ ಐವತ್ತು ಕೋಟಿ ಘೋಷಿಸಿತ್ತು. ಬಂದದ್ದು ಶೂನ್ಯ. ಅಲ್ಪ ಸಂಖ್ಯಾತ ವಿಧ್ಯಾರ್ಥಿಗಳ ವಿಧ್ಯಾರ್ಥಿವೇತನಕ್ಕಾಗಿ ಘೋಶಿಸಿದ್ದು160ಕೋಟಿ
ಬಿಡುಗಡೆ ಯಾದದ್ದು 50.63 ಕೋಟಿ
ವ್ಯಯವಾದದ್ದು 39.67 ಕೋಟಿ
ಇದು ಕಳೆದ ಬಾರಿಯ ಬಜೆಟ್‌ನಲ್ಲಿ ಬಿಡುಗಡೆ ಯಾದ ವಿವರಗಳು. ಹೀಗೆ ಅಲ್ಪ ಸಂಖ್ಯಾತರಿಗೆ ಲಾಲಿ ಪಾಪ್ ನೀಡಿ ಸಮಧಾನಿಸಲು ಸರಕಾರ ಹೊರಟಿದೆ. ಅಲ್ಪ ಸಂಖ್ಯಾತರ ಮಹತ್ವದ ಪಾತ್ರದಿಂದ ಈ ಸರಕಾರ ಆಡಳಿತ ಕ್ಕೆ ಬಂದಿದೆ.ಸರಕಾರ ಅಲ್ಪ ಸಂಖ್ಯಾತರ ಅಭಿವೃದ್ದಿ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ನ್ಯಾಯವಲ್ಲ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಗ್ಯಾರಂಟಿಗೆ ಸರಕಾರ ಹೆಚ್ಚು ಒತ್ತು ಕೊಟ್ಟಂತೆ ಕಂಡು ಬರುತ್ತದೆ. ರೈತರಿಗೆ ಆರ್ಥಿಕ ವಾಗಿ ದುರ್ಬಲ ರಾಗಿರುವವರಿಗೆ ತ್ವರಿತ ನ್ಯಾಯ ಒದಗಿಸಲು ಸಿವಿಲ್ ಪ್ರಕ್ರಿಯೆ ಸಂಹಿತೆ ಆಧಿ ನಿಯಮ, ವಸತಿ ರಹಿತರನ್ನು ಗುರುತಿಸಲು ಸಮೀಕ್ಷೆ, ನ್ಯಾಯಾಲಯದ ಕಲಾಪದ ನೇರ ಪ್ರಸಾರ ಇವೆಲ್ಲವೂ ಉತ್ತಮ ಅಂಶವಾಗಿದೆ.

Latest Indian news

Popular Stories