ಬೆಂಗಳೂರು: ಬಜೆಟ್ ನ ಹತ್ತು ಪುಟ ಓದುವ ಮೊದಲೇ ಬಿಜೆಪಿಗರು ಸಭಾ ತ್ಯಾಗ ಮಾಡಿರುವುದು “ಕನ್ನಡಿಗರಿಗೆ ಮಾಡಿದ ಅವಮಾನ” ವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಾವು ಕೂಡ ಈ ಹಿಂದೆ ವಿನೂತನವಾಗಿ ಪ್ರತಿಭಟನೆ ನಡೆಸಿದ್ದೇವು. ಆದರೆ ಸಭಾತ್ಯಾಗ ಮಾಡಿರಲಿಲ್ಲ ಬಜೆಟ್ ಮಂಡಿಸಲು ಬಿಟ್ಟಿದ್ದೆವು. ಬಜೆಟ್ ನ ಆರಂಭದಲ್ಲಿ ಓದಿದ್ದು ಕೇಂದ್ರ ಸರಕಾರದ ಅಂಕಿ ಅಂಶವೇ ಆಗಿದೆ ಎಂದು ಬಿಜೆಪಿಗರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.