ಅಂಬಟ್ಟಿ ಎಂಬ ಚಂದದ ನಾಡು ಹಾದಿಯಿಲ್ಲದ ಗ್ರಾಮಸ್ಥರ ಪಾಡು

ವಿರಾಜಪೇಟೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರವಿರುವ ಅಂಬಟ್ಟಿ ಎಂಬ ಚಂದದ ಗ್ರಾಮದ ಪರಿಸ್ಥಿತಿ ಅಲ್ಲಿಗೆ ತೆರಳಿದ ಮೇಲೆಯೇ ನೈಜತೆ ತಿಳಿಯಲು ಸಾದ್ಯ..

ಸುಮಾರು ಅರವತ್ತಕಿಂತಲೂ ಅದಿಕ ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮದಲ್ಲಿ ಕೃಷಿಯೇ ಇಲ್ಲಿನವರ ಮೂಲ ಆಧಾರ.
ಪ್ರಕೃತಿ ,ಸೌಂದರ್ಯ ,ಸುತ್ತಮುತ್ತಲ ಕಾಫಿ ತೋಟಗಳ ನಡುವೆ ಇರುವ ಈ ಸುಂದ ಗ್ರಾಮದ ಜನರ ಪರಿಸ್ಥಿತಿ ಕ ಅತಿ ದುಸ್ತರ ..

ಕಳೆದ ಮೂವತ್ತಕ್ಕೂ ಅದಿಕ ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜೀವನ ಸಾಗಗ್ರಾಮಸ್ಥರಿಗೆ ಅತಿ ಮುಖ್ಯವಾಗಿ ಒಂದು ಉತ್ತಮ ರಸ್ತೆಯಿಲ್ಲದೇ ಬದುಕುತ್ತಿದ್ದರೂ ಸಂಭಂದ ಪಟ್ಟವರೂ ಏನೂ ಅರಿಯದವರಂತೆ ಕಡೆಗಣಿಸಿದ್ದು ದುರಂತ.ಪುಟ್ಟ ಮಕ್ಕಳು, ಶಾಲಾ ವಿದ್ಯಾರ್ಥಿಗಳ ಜೀವಕ್ಕೆ ಇಲ್ಲಿನ ರಸ್ತೆಯು ಅಪಾಯಕಾರಿ ಪರಿಣಮಿಸಿದೆ ಎಂದು ಸ್ಥಳೀಯರು ಆತಂಕ ವೈಕ್ತಪಡಿಸಿದ್ದಾರೆ..

ವೃದ್ಧರು, ವಿಶೇಷ ಚೇತನರು.ಮತ್ತು ರೋಗಿಗಳನ್ನು ಕರೆದುಕೊಂಡು ಹೋಗಲು ಆಗದೆ ಬಹಳ ವೇದನೆಯನ್ನು ಅನುಭವಿಸುತ್ತಿರುವ ಗ್ರಾಮಸ್ಥರು ಮುಂದಿನ ಪೀಳಿಗೆಗಾದರೂ ಸರಿಮಾಡಿಸಿ ಕೊಡಿ ಎಂದು ಸಂಬಂದ ಕಛೇರಿಗಳಿಗೆ ಅಲೆದಾಡುತ್ತಿರವುದು ಸರ್ವೇಸಾಮಾನ್ಯವಾಗಿದೆ…

ಇಲ್ಲಿನ ಅಪಾಯಕಾರಿ ರಸ್ತೆಯ ಪರಿಣಾಮ ಸಾವು ನೋವು ಗಳಲ್ಲಿ ನರಳುವ ರೋಗಿಗಳನ್ನು ಕೊಂಡೊಯ್ಯಲು ತುರ್ತು ವಾಹನಗಳು ಬರಲು ಹಿಂದೇಟು ಹಾಕುವ ಪರಿಸ್ಥಿತಿ.ನಿರ್ಮಾಣ ಗೊಂಡಿದೆ ಮಾತ್ರವಲ್ಲ ಆಟೋ ಚಾಲಕರು, ಬಾಡಿಗೆ ವಾಹನಗಳು ಕೂಡ ಬರಲು ಒಪ್ಪುತ್ತಿಲ್ಲ. ಇದರಿಂದ ಕಂಗೆಟ್ಟಿರುವ ಗ್ರಾಮಸ್ಥರ ಪಾಡು.ಹೇಳಲಾಗದು.

ವಿರಾಜಪೇಟೆ – ಗೋಣಿಕೊಪ್ಪಲು ಹೆದ್ದಾರಿಯಿಂದ ಕೇವಲ ಎರಡೂವರೆ ಕಿಲೊಮೀಟರ್ ಅಂತರವಿರುವ ಈ ಗ್ರಾಮ ಅಲ್ಲಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ದೊಡ್ಡ.ಬಾಡ್ರಸ್ ಕಲ್ಲುಗಳು ಎದ್ದಿರುವ ರಸ್ತೆಯಲ್ಲಿ ನಡೆಯಲೂ ಅಸಾದ್ಯವಾಗಿದೆ.ಕೂರ್ಗ್ ಆಲ್ ಕ್ನಿನಿಕ್ ಹೊಂದಿರುವ ಅಂಬಟ್ಟಿ ಗ್ರಾಮದ ಮತ್ತೊಂದು ಇಕ್ಕಲೆಯ ಗ್ರಾಮಸ್ಥರಂತೂ ಮುಂದಿನ ಚುನಾವಣೆ ಮುಂಚಿತವಾಗಿ ಪಾಠ ಕಲಿಸುವ ತೀರ್ಮಾನಕ್ಕೆ ಬರಲಿದ್ದೇವೆ ಎಂದಿದ್ದಾರೆ..

ಮಾಜಿ ಯೋಧ ಹಾಗೂ ಚಿತ್ರಕಲಾವಿದ ಮುಸ್ತಪರವರು ಮಾತನಾಡಿ ಹಲವಾರು ವರುಷಗಳಿಂದ ಜಿಲ್ಲಾ ಪಂಚಾಯತ್ ,ಹಾಗೂ ಸಂಬಂದ ಕಚೇರಿ ಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಕೆಲವೊಂದು ಕಡೆ ಅರ್ದಂಬರ್ದ ಪ್ಯಾಚ್ ವರ್ಕ್ ಗಳನ್ನು ಮಾಡಿ ಕೈ ತೊಳೆದು ಕೊಂಡಿದ್ದು ಕಂಡು ಬಂದರೆ ಅದರಿಂದ ಏನೂ ಪರಿಹಾರ ಆಗಲಿಲ್ಲ..‌ಇನ್ನೂ ಹೀಗೆ ಮುಂದುವರಿದರೆ ಗ್ರಾಮದ ಕುಟುಂಬಗಳು ಹೆದ್ದಾರಿ ಬದಿಯಲ್ಲಿ ತಂಗುವ ಪರಿಸ್ಥಿತಿ ನಿರ್ಮಾನವಾಗಲಿದೆ ಎಂದರು..

ಮತ್ತೊಬ್ಬ ಗ್ರಾಮಸ್ತರಾದ ಸರಕಾರಿ ಗುಮಾಸ್ತ ಶರೀಪ್ ಪ್ರತಿಕ್ರಿಯಿಸಿ.. ನೀರು ಹಾಗೂ ಮುಖ್ಯವಾಗಿ ರಸ್ತೆಯ ದುರಸ್ತಿಗಾಗಿ ಜನ ಪ್ರಇಲಾಖೆಿ ಹಾಗೂ ಶಾಸಕರುಗಳನ್ನು ಬಹಳಷ್ಟು ಬಾರಿ ಬೇಟಿ ಮಾಡಿ ಅಹವಾಲನ್ನು ಸಲ್ಲಿಸಿದ್ದರೂ. ಯಾವುದೇ ಪ್ರಯೋಜನ ಆಗಲಿಲ್ಲ. ಚುನಾವಣೆ ಹತ್ತಿರ ಬರುವ ಸಂಧರ್ಭದಲ್ಲಿ ಈ ಬಾರಿ ಖಂಡಿತ ದುರಸ್ತಿ ಪಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ .ನಂತರ. ಅದೇ ರಾಗ ಅದೇ ಹಾಡು ಎಂಬಂತಾಗಿದೆ..ದಯವಿಟ್ಟು ಮುಂದಿನ ಪೀಳಿಗೆಗಾದರೂ ಒಂದು ಉತ್ತಮ ರಸ್ತೆ ನಿರ್ಮಿಸಲೀ ಎಂದು ಬೇಡುತ್ತೇವೆ..ಎಂದರು..

ಗ್ರಾಮಸ್ಥೆ ಗೃಹಿಣಿ ಫಾತಿಮಾರವರು ಹೇಳುವಂತೆ ನಮ್ಮ ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು ‌ಶಾಲಾ ವಾಹನ ಸೇರಿದಂತೆ ಇನ್ನಿತರ ಆಟೋ ಚಾಲಕರು ಮತ್ತು ಇತರ ವಾಹನಗಳು ಬರಲು ಸಮ್ಮತಿಸುತ್ತಿಲ್ಲ. ಇದರಿಂದ ಅವರ ಭವಿಷ್ಯಕ್ಕೂ ಇಲ್ಲಿನ ಪರಿಸ್ಥಿತಿ ಮಾರಕವಾಗಿದೆ ಎಂದರು..

ಒಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಂಬಟ್ಟಿ ಗ್ರಾಮಕ್ಕೆ ಉತ್ತಮ ರಸ್ತೆಯೊಂದಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಗ್ರಾಮದ ಜನತೆಗೆ ಪರಿಹಾರವನ್ನು ಒದಗಿಸುವಂತಾಗಲೀ ಎಂಬುದೇ ನಮ್ಮೆಲ್ಲರ ಆಶಯ..
ಅಬ್ದುಲ್ಲಾ ಮಡಿಕೇರಿ✍????

Latest Indian news

Popular Stories