ಬಾರ್ ಗಳಿಗೆ ರಾತ್ರಿ ಒಂದು ಗಂಟೆಯ ವರೆಗೆ ತೆರೆಯಲು ಅನುಮತಿ ನಿರ್ಧಾರದಿಂದ ಹಿಂದೆ ಸರಿಯಲು ಸರಕಾರಕ್ಕೆ ವೆಲ್ಪೇರ್ ಪಾರ್ಟಿ ಆಗ್ರಹ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಾರ್ ಮತ್ತು ಸ್ಟಾರ್ ಹೋಟೆಲ್ ಗಳಿಗೆ ಮಧ್ಯರಾತ್ರಿ ಒಂದು ಗಂಟೆಯ ವರೆಗೆ ತೆರೆಯಲು ರಾಜ್ಯ ಸರಕಾರ ಅನುಮತಿ ನೀಡಿರುವುದು ಖಂಡನೀಯ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ರಾದ ಅಡ್ವಕೇಟ್ ತಾಹೇರ್ ಹುಸೇನ್ ಸರಕಾರದ ಕ್ರಮವನ್ನು ತೀವ್ರ ರೀತಿಯಲ್ಲಿ ಖಂಡಿಸಿದ್ದಾರೆ.

ಅವರು ಮಾತನಾಡುತ್ತಾ ಬಡ ಬೀದಿ ವ್ಯಾಪಾರಿಗಳಿಗೆ ರಾತ್ರಿ ಹತ್ತು ಗಂಟೆಯಾದರೆ ಸಾಕು ದರ್ಪದಿಂದ ಕಿರುಕುಳ ನೀಡಿ ಬಂದ್ ಮಾಡಿಸುತ್ತಾರೆ. ಮದ್ಯ ವ್ಯಸನಿಗಳಿಂದಲೇ ಅಪರಾಧ ಹೆಚ್ಚಾಗುತ್ತಿದೆ ಹೀಗಿದ್ದರೂ ಅದಕ್ಕೆ ಸಮಯ ವಿಸ್ತರಿಸಿ ಇನ್ನಷ್ಟು ಹೆಚ್ಚಿಸಲು ಅನುವು ಮಾಡಿಕೊಡುವ ಸರಕಾರಕ್ಕೆ ಇತ್ತೀಚೆಗೆ ಕುಡುಕರ ಮೇಲೆ ಒಲವು ಹೆಚ್ಚಾಗಿದೆ. ಇತ್ತೀಚೆಗೆ ಸ್ಕಾಚ್ ಗಳ ಬೆಲೆಯಲ್ಲಿ ತೀವ್ರ ಇಳಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕುಡಿತಕ್ಕೆ ಅವಕಾಶ ಕೊಟ್ಟು ರಾಜ್ಯದ ಶಾಂತಿ ನೆಮ್ಮದಿಯನ್ನು ಹಾಳು ಮಾಡಲು ಸರಕಾರ ಹೊರಟಿದೆಯೇ ಎಂದು ಪ್ರಶ್ನಿಸಿದ ಅವರು ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಅಪರಾಧ ಪ್ರಕ್ರಿಯೆಗಳು ಮಧ್ಯವ್ಯಸನಿಗಳಿಂದಲೇ ಹೆಚ್ಚಾಗಿ ನಡೆಯುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯಾದರೂ ಸರಕಾರಕ್ಕೆ ಇರಬೇಡವೇ? ಇದನ್ನು ತಡೆಗಟ್ಟುವ ಬದಲು ಅದನ್ನು ಸುಗಮಗೊಳಿಸಲು ಹೊರಟದ್ದು ಖಂಡನೀಯ. ಇಂತಹ ಅಡ್ಡದಾರಿಯಿಂದ ಗಳಿಸಿದ ಭಾಗ್ಯ ಯೋಜನೆಯು ಜನರಿಗೆ ಪ್ರಯೋಜನಕಾರಿಯಾಗುವುದೇ? ಸರಕಾರಕ್ಕೆ ಕೇವಲ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಾಡುವ ಇಂತಹ ನಡೆಯನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಸರಕಾರ ಕೂಡಲೇ ಈ ನಿರ್ಧಾರವನ್ನು ರದ್ದು ಪಡಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

Latest Indian news

Popular Stories