ಕರಾವಳಿಯಲ್ಲಿ ಬಕ್ರೀದ್ ಕಲರವ: ಕುರಿ, ಮೇಕೆ, ಟಗರು, ಆಡು‌ ಭರ್ಜರಿ ವ್ಯಾಪಾರ

ಉಡುಪಿ (THG ): ಸೋಮವಾರ ಮುಸ್ಲಿಮರು ಎರಡನೇ ಹಬ್ಬ ಈದ್-ಉಲ್-ಅಝ್ಹಾ ಆಚರಣೆಗೆ ಸಿದ್ಧರಾಗುತ್ತಿದ್ದು ಸಂಪ್ರದಾಯದಂತೆ ಪ್ರಾರ್ಥನೆಯ ನಂತರ ಪ್ರಾಣಿ ಬಲಿ ಬಲಿ ನೀಡುವುದು ರೂಢಿ. ಈ ಸಂದರ್ಭಕ್ಕಾಗಿ ರೈತರಿಂದ ಜಾನುವಾರುಗಳನ್ನು ಮುಸ್ಲಿಮರು ಖರೀದಿಸುತ್ತಾರೆ.

ಈಗಾಗಲೇ ವ್ಯಾಪಾರಸ್ಥರು ಸ್ಟಾಲ್’ಗಳನ್ನು ಹಾಕಿ ಕುರಿ ಮಾರಾಟ ನಡೆಸುತ್ತಿದ್ದು ಭರ್ಜರಿ ವ್ಯಾಪಾರ ನಡೆಯುತ್ತಿದೆ. ಕುರಿ, ಮೇಕೆ, ಟಗರು, ಆಡುಗಳ ಮಾರಾಟ ಮಾಡಲಾಗುತ್ತಿದ್ದು ಕೆ.ಜಿ ರೂ. 470 ರಿಂದ ರೂ. 550 ವರೆಗೂ ಮಾರಾಟವಾಗುತ್ತಿದೆ. ಹೆಚ್ಚಾಗಿ ಜಾನುವಾರುಗಳು ಹಾವೇರಿ, ಪೂನಾ ಸೇರಿದಂತೆ ‌ಉತ್ತರ ಕರ್ನಾಟಕದ ಭಾಗದ ರೈತರಿಂದ ಖರೀದಿಸಿ ತಂದು ವ್ಯಾಪರಸ್ಥರು ಮಾರಾಟ ಮಾಡುತ್ತಾರೆ. ಈ ಬಾರಿ ಹಲವು ಕಡೆಯಲ್ಲಿ ಜಾನುವಾರು ವ್ಯಾಪಾರದ ಸ್ಟಾಲ್’ಗಳನ್ನು ಹಾಕಿ ವ್ಯಾಪಾರ ಮಾಡಲಾಗುತ್ತಿದೆ.

ಸೋಮವಾರ ಬೆಳಿಗ್ಗೆ ಈದ್ ನಮಾಝ್ ನಂತರ ಕುರ್ಬಾನಿ (ಬಲಿ) ನೀಡಲು ಆರಂಭವಾಗುತ್ತದೆ. ನಂತರ ಮಾಂಸವನ್ನು ಬಡವರಿಗೆ ಹಂಚುವುದು ಪ್ರತೀತಿ.

Latest Indian news

Popular Stories