ಕುಮಟಾ ಯಲವಳ್ಳಿ ಗ್ರಾಮದಲ್ಲಿ 10 ಅಡಿಯ ಕಾಳಿಂಗ ಸರ್ಪ ರಕ್ಷಣೆ;ಒಂದು ವಾರದಲ್ಲಿ 3 ಕಾಳಿಂಗ ಸರ್ಪ ರಕ್ಷಣೆ ಮಾಡಿದ ಸ್ನೇಕ್ ಪವನ್

ಕಾರವಾರ : ಕುಮಟಾ ತಾಲೂಕಿನ ಯಲವಳ್ಳಿ ಗ್ರಾಮದ ಗಣೇಶ್ ಭಟ್ಟ ಅವರ ಮನೆಯ ಅಡುಗೆ ಕೋಣೆಯಲ್ಲಿ ಇಂದು ಬೆಳಿಗ್ಗೆ ಕಾಳಿಂಗ ಸರ್ಪ ಕಾಣಿಸಿತು .

ಮನೆ ಅಡುಗೆ ಕೋಣೆಯ ಮಿಕ್ಸರ್ ಮೇಲೆ ಸರ್ಪ ಮಲಗಿರುವುದು ಕಂಡು ಬಂತು. ಮನೆಯವರು ಚಹಾ ಮಾಡಲೆಂದು ಅಡುಗೆ ಕೋಣೆ ಬಂದಾಗ ಸರ್ಪ ಕಂಡು, ಅದನ್ನು ಕೇರೆ ಹಾವೆಂದು ಭಾವಿಸಿ , ತುಂಬಾ ಸಮೀಪದಿಂದ ಮನೆಯ ಹೊರಗೆ ಓಡಿಸಲು ಪ್ರಯತ್ನಿಸಿದಾಗ ಕಾಳಿಂಗ ಸರ್ಪ ಹೆಡೆ ಬಿಚ್ಚಿದೆ. ನಂತರ ಉರಗ ತಜ್ಞರಾದ ಪವನ್ ನಾಯ್ಕ ಅವರನ್ನು ಕರೆಯಿಸಿ, ಕಾಳಿಂಗ ಸರ್ಪ ಹಿಡಿದು, ಸಮೀಪದ ಅರಣ್ಯಕ್ಕೆ ಬಿಡಲಾಗಿದೆ.

ಕುಮಟಾ ತಾಲ್ಲೂಕಿನಲ್ಲಿ ವಾರದಲ್ಲಿ ಮೂರು ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ರಕ್ಷಣೆ ಮಾಡಲಾಗಿದೆ.

Video:

Latest Indian news

Popular Stories