ತುಮಕೂರು : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಾಟ್ಸಪ್ ನಲ್ಲಿ ಬರುವ ಅಪರಿಚಿತ ಲಿಂಕ್ ಕ್ಲಿಕ್ ಮಾಡುವ ಮೂಲಕ ಪ್ರಾಧ್ಯಾಪಕರೊಬ್ಬರು ಬರೋಬ್ಬರಿ 10 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹೌದು, ವಾಟ್ಸಪ್ ನಲ್ಲಿ ಸೈಬರ್ ವಂಚಕರು ಕಳುಹಿಸಿದ ಲಿಂಕ್ ಮೂಲಕ ನಕಲಿ ಆಯಪ್ ಡೌನ್ಲೋಡ್ ಮಾಡಿಕೊಂಡ ತುಮಕೂರು ನಗರದ ಎಸ್.ಎಸ್.ಪುರಂನ ನಿವಾಸಿ ಪ್ರಾಧ್ಯಾಪಕ ಟಿ.ಆರ್.ಹೇಮಂತ್‌ಕುಮಾರ್ ಎಂಬುವರು ಬರೋಬ್ಬರಿ 10.53 ಲಕ್ಷ ರೂ.ಕಳೆದುಕೊಂಡಿದ್ದಾರೆ.
ಪ್ರಾಧ್ಯಾಪಕ ಟಿ.ಆರ್. ಹೇಮಂತ್ ಕುಮಾರ್ ಅವರು ವಾಟ್ಸಪ್ ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ‘ಡಿ-ಮಾಟ್ ಟ್ರೇಡಿಂಗ್ ಆಯಪ್’ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸೈಬರ್ ವಂಚಕರು ತಿಳಿಸಿದ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಆ. 5ರಿಂದ 27ರ ವರೆಗೆ ಹಂತ ಹಂತವಾಗಿ 10.53 ವರ್ಗಾಯಿಸಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ವಾಪಸ್ ಬಾರದೇ ಇದ್ದಾಗ ತಾವು ಮೋಸ ಹೋಗಿರುವುದಾಗಿ ತಿಳಿದುಬಂದಿದೆ. ಬಳಿಕ ಅವರು ತುಮಕೂರು ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ.