ತುಮಕೂರು : ಶಾರ್ಟ್ ಸರ್ಕ್ಯೂಟ್ ನಿಂದ ಬಾಲಕರ ವಸತಿ ನಿಲಯ ಹೊತ್ತಿ ಉರಿದಿದ್ದು ವಸತಿ ನೀಲಯದಲ್ಲಿರುವ ಕಿಟಕಿ, ಬೆಡ್ಡುಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆ ಎಂಬಲ್ಲಿ ಈ ಘಟನೆ ನಡೆದಿದೆ.ಅದೃಷ್ಟವಶಾತ್ 15 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಬಲಿ ಈ ಘಟನೆ ನಡೆದಿದ್ದು, ಬೆಂಕಿಗೆ ಘಟನೆಯಲ್ಲಿ ವಸತಿ ನಿಲಯದ ಬೆಡ್ ಗಳು ಸುಟ್ಟು ಕರಕಾಲಾಗಿವೆ. ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ.
ವಸತಿ ನಿಲಯದ ಕಿಟಕಿ ಬಾಗಿಲು 30ಕ್ಕೂ ಹೆಚ್ಚು ಬೆಡ್ಗಳು ಸುಟ್ಟು ಬಸ್ಮವಾಗಿವೆ ಘಟನೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸಿ ಮುಂದೆ ಆಗುವಂತಹ ಅನಾಹುತವನ್ನು ತಪ್ಪಿಸಿದ್ದಾರೆ. ಘಟನೆ ಕುರಿತಂತೆ ವೈ ಎನ್ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.