ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ; ಕರೆಂಟ್ ಶಾಕ್ ಹೊಡೆದು ಲೈನ್ ಮೆನ್ ಸ್ಥಿತಿ ಗಂಭೀರ

ತುಮಕೂರು: ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ ಸಂಭವಿಸಿದ್ದು, ಕರೆಂಟ್ ಶಾಕ್ ಹೊಡೆದು ಲೈನ್ ಮೆನ್ ಸ್ಥಿತಿ ಗಂಭೀರವಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಇಡ್ಗುರು ಗ್ರಾಮದಲ್ಲಿ ನಡೆದಿದೆ.

ಇಮ್ರಾನ್ ಗಂಭೀರವಾಗಿ ಗಾಯಗೊಂಡಿರುವ ಲೈನ್ ಮೆನ್. ಲೈನ್ ದುರಸ್ತಿಗೆಂದು ಕರೆಂಟ್ ಕಂಬ ಹತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ಲೈನ್ ಮೆನ್ ಕಂಬದಲ್ಲಿಯೇ ಸಿಲುಕಿಕೊಂಡು ಪರದಾಡಿದ್ದಾರೆ.

ತಕ್ಷಣ ಎಚ್ಚೆತ್ತ ಸಿಬ್ಬಂದಿಗಳು ಲೈನ್ ಮೆನ್ ನನ್ನು ರಕ್ಷಿಸಿದ್ದಾರೆ. ಗಾಯಾಳುವನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

Latest Indian news

Popular Stories