ನಂಬಿಸಿ ನಡು ನೀರಿನಲ್ಲಿ ಕೈಬಿಟ್ಟ ಮಾಜಿ ಸಿಎಂ; ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ

ತುಮಕೂರು: ಬಿಜೆಪಿ ಲೋಕಸಭಾ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕೆಂಡಾಮಂಡಲರಾಗಿದ್ದು, ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಜೆ.ಸಿ.ಮಾಧುಸ್ವಾಮಿ, ಮನೆಯಲ್ಲಿ ಕುಳಿತಿದ್ದವರನ್ನು ಯಡಿಯೂರಪ್ಪ ಚುನಾವಣೆಗೆ ರೆಡಿಯಾಗಿ ಎಂದರು.ಈಗ ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ನಂಬಿಸಿ ಕೈಬಿಟ್ಟ ಮಾಜಿ ಸಿಎಂ ಯಡಿಯೂರಪ್ಪ ಮೇಲೆ ನಮಗೆ ಬೇಸರವಿದೆ. ವಿ.ಸೋಮಣ್ಣ ಅವಕಾಶವಾದಿ, ಅವರು ಅವಕಾಶ ಕೇಳಿದ್ದಾರೆ. ಸೋಮಣ್ಣ ಮೇಲೆ ನಮಗೆ ಬೇಸರವಿಲ್ಲ. ಆದ್ರೆ ಯಡಿಯೂರಪ್ಪ ಮೇಲೆ ಬೇಸರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರ್ಯಾರು ನಮಗೆ ಅನ್ಯಾಯ ಮಾಡಿದ್ರು ಎಂದು ಪಕ್ಷಕ್ಕೆ ಹತ್ತು ಪೇಜ್ ಬರೆದುಕೊಟ್ಟವರು ದೊಡ್ಡವರಾಗಿದ್ದಾರೆ. ನಿಷ್ಠಾವಂತರಾಗಿ ದುಡಿದ ನಾವು ಇಂದು ಲೆಕ್ಕಕ್ಕಿಲ್ಲ ಅಂದ್ರೆ ಹೇಗೆ? ಎಂದು ಕಿಡಿಕಾರಿದ್ದಾರೆ. ನಂಬಿದವರೇ ನಮಗೆ ಮೋಸ ಮಡುತ್ತಾರೆ ಎಂಬ ನೋವು. ನಾನು ಬಿಜೆಪಿಗೆ ಹೋಗಲು ಯಡಿಯೂರಪ್ಪ ಬಿಟ್ಟು ಬೇರೆ ಕಾರಣವಿರಲಿಲ್ಲ.

ಕೆಜೆಪಿ ಪಕ್ಷ ಮಾಡಿದಾಗ ಯಡಿಯೂರಪ್ಪಗೆ ಶಕ್ತಿ ಕೊಡಬೇಕು ಎಂದು ಕೆಜೆಪಿಗೆ ಹೋದೆವು. ಯಡಿಯೂರಪ್ಪ ಬದಲಾದ ಹಾಗೇ ನಾವೂ ಅವರ ಜೊತೆ ಹೋಗಿದ್ದು ತಪ್ಪಾ? ನಾವು ಪ್ರಶ್ನೆ ಮಾಡದೇ ಲೀಡರ್ ಒಳ್ಳೆದಾ? ಕೆಟ್ಟದಾ ಎಂದು ಅವರನ್ನು ಪಾಲೋ ಮಾಡುತ್ತಾ ಹೋದೆವು. ಮನೆಯಲ್ಲಿ ಕುಳಿತಿದ್ದವರನ್ನು ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿ ಈಗ ನಡು ನೀರಲ್ಲಿ ಕೈಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Latest Indian news

Popular Stories