ಅಂಬಲಪಾಡಿ: ಅಂಗಡಿಗೆ ನುಗ್ಗಿ 5.64ಲಕ್ಷ ರೂ ಮೌಲ್ಯದ ಸಿಗರೇಟ್ ಪ್ಯಾಕ್ ಕಳವು

ಅಂಬಲಪಾಡಿ ಕಾಳಿಕಾಂಬ ನಗರದಲ್ಲಿರುವ ಅಂಗಡಿಯೊಂದಕ್ಕೆ ಜೂ.21 ರಂದು ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗದು ಹಾಗೂ ಸಿಗರೇಟ್ ಪ್ಯಾಕ್ ಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ

ಆನಂದ ಭಟ್ ಎಂಬವರು ಸಮೃದ್ದಿ ಎಂಟರ್ ಪ್ರೈಸಸ್ ಎಂಬ ಡಿಸ್ಟ್ರಿಬ್ಯೂಷನ್ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು ಇದರಲ್ಲಿ ಸಿಗರೇಟ್ ಹಾಗೂ ಇತರ ಪದಾರ್ಥಗಳನ್ನು ಸಂಗ್ರಹಿಸಿದ್ದರು.

ಅಂಗಡಿಯ ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರಾವರ್ ನಲ್ಲಿದ್ದ 17 ಸಾವಿರ ನಗದು ಹಾಗೂ 5.64ಲಕ್ಷ ಮೌಲ್ಯದ ಸಿಗರೇಟ್ ಪ್ಯಾಕ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ

Latest Indian news

Popular Stories