ಬೆಂಗಳೂರಿನ ಜೈನ್ ವಿಶ್ವವಿಧ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ನಾಯಕರಾದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಲು ಕುಮ್ಮಕ್ಕು ನೀಡಿದ ವಿಶ್ವವಿಧ್ಯಾನಿಲಯದ ಕುಲಪತಿಯವರನ್ನು ಮತ್ತು ಉಪನ್ಯಾಸಕರನ್ನು ಈ ಕೂಡಲೇ ವಜಾ ಮಾಡಬೇಕು.ಮತ್ತು ರೂಪಕ ಬರೆದ , ನಿರ್ಧೇಶಿಸಿದ , ಅಭಿನಯಿಸಿದ ವಿಧ್ಯಾರ್ಥಿಗಳ ಮೇಲೆ ದಲಿತ ಧೌರ್ಜನ್ಯ ತಡೆ ಕಾಯ್ದೆ ಆಡಿಯಲ್ಲಿ ಕೇಸು ದಾಖಲಿಸಿ ತಕ್ಷಣವೇ ಜೈಲಿಗಟ್ಟಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ.
ಅವರು ಇಂದು ಉಡುಪಿ ಟೌನ್ ಪೋಲಿಸ್ ಸ್ಟೇಷನ್ ನಲ್ಲಿ ಲಿಖಿತ ದೂರು ನೀಡಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಅಡಿಯಲ್ಲಿ ವಿಶ್ವವಿಧ್ಯಾನಿಲಯದಲ್ಲಿ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಮೀಸಲಾತಿ , ಎಲ್ಲಾ ಅನುಧಾನ , ರಿಯಾಯಿತಿ ಎಲ್ಲವನ್ನೂ ಪಡೆದು ಅನುಭವಿಸಿ ಈಗ ಅಂಬೇಡ್ಕರ್ ರವರಿಗೇ ಅವಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.
ಉಡುಪಿ ಟೌನ್ ಪೋಲಿಸ್ ಸ್ಟೇಷನ್ ಗೆ ಹೋದ ನಿಯೋಗದಲ್ಲಿ ದ.ಸಂ.ಸ. ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಜಿಲ್ಲಾ ಖಜಾಂಚಿ ಶ್ರೀಧರ್ ಕುಂಜಿಬೆಟ್ಟು , ದಲಿತ ಮಹಿಳಾ ಸಂಚಾಲಕಿ ಶ್ರೀಮತಿ ಕುಸುಮ ಗುಜ್ಜರ್ ಬೆಟ್ಟು , ವತ್ಸಲಾ ವಿನೋದ್, ದಲಿತ ಮುಖಂಡರಾದ ಸಂಪತ್ ಗುಜ್ಜರ್ ಬೆಟ್ಟು , ನಂದಕುಮಾರ್ , ಅನಿಶ್ , ಗೌತಮ್ , ತೌಸಿಫ್ ಉಪಸ್ಥಿತರಿದ್ದರು.