ಅಂಬೇಡ್ಕರರು ಸಹಿಸಿದ ಕಷ್ಟಗಳಿಂದಾಗಿ ಅವರ ಶ್ರಮ ತ್ಯಾಗದ ಫಲಗಳಿಂದಾಗಿ ಇವತ್ತು ನಾವುಗಳು ಇಂತಹ ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಅವರ ಸಾಮಾಜಿಕ ಚಿಂತನೆಗಳನ್ನು ಅರಿತು ಆ ಮಾರ್ಗದಲ್ಲಿ ನಡೆದಾಗ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದು ಚಿಂತಕ ಪ್ರೊಫೆಸರ್ ಫಣಿರಾಜ್ ಮಣಿಪಾಲ ತಿಳಿಸಿದರು.
ಅವರು ಇಂದು ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ದಯಾನಂದ್ ಕಪ್ಪೆಟ್ಟುರವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಅಭಿಮಾನಿ ಬಳಗ ಉಡುಪಿ ಇವರು ಆಯೋಜಿಸಿದ 132ನೇ ವರ್ಷದ ಅಂಬೇಡ್ಕರ್ "ಜಯಂತ್ಯೋತ್ಸವ"* ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಲಿತ ನಾಯಕರಾದ ಹರಿಶ್ಚಂದ್ರ ಬಿರ್ತಿ, ಚೇತನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉಮೇಶ್ ನಾಕೂರು, ಖಜಾಂಚಿಗಳಾದ ವಿವೇಕಾನಂದ ಕಾಮತ್, ದಲಿತ ಚಿಂತಕರಾದ ಶ್ಯಾಮರಾಜ್ ಭಿರ್ತಿ, ಮೂಡುಬೆಟ್ಟು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಲೋಚನಾ ಟೀಚರ್, ಮತ್ತೋರ್ವ ದಲಿತ ಯುವ ನಾಯಕರಾದ ಜಗದೀಶ್ ಗಂಗೊಳ್ಳಿ, ಸಾಧಿಕ್ ಸಾಹೇಬ್ ಮಧ್ವನಗರ, ಹಾಗೂ ಗುಜ್ಜರಬೆಟ್ಟು , ಕೆಮ್ಮಣ್ಣು , ಮೂಡುಬೆಟ್ಟು , ಕಪ್ಪೆಟ್ಟು, ಪುತ್ತೂರು ಹಾಗೂ ಗಂಗೊಳ್ಳಿ ಹೀಗೆ ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಂಬೇಡ್ಕರ್ ಅಭಿಮಾನಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಚೈತನ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉಮೇಶ್ ನಾಕೂರು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಚೈತನ್ಯ ಚಾರಿ ಟೇಬಲ್ ಟ್ರಸ್ಟ್ ನ ವತಿಯಿಂದ ಸಮಾಜ ಸೇವಕರಾದ ದಯಾನಂದ ಕಪ್ಪೆಟ್ಟು ಹಾಗೂ ವಿವೇಕಾನಂದ ಕಾಮತ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜೇಶ್ ಕೆಮ್ಮಣ್ಣು ಸ್ವಾಗತಿಸಿ ದಿನೇಶ್ ಮೂಡುಬೆಟ್ಟು ವಂದಿಸಿದರು. ಹಾಗೂ ಸುಮಿತ್ ಮಲ್ಪೆ ಕಾರ್ಯಕ್ರಮವನ್ನು ನಿರೂಪಿಸಿದರು