ಉಡುಪಿ: ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಇಂದು ಕಾಪುವಿಗೆ ಆಗಮಿಸಿರುವ ಹೆಲಿಕಾಪ್ಟರ್ ನಲ್ಲಿ ಚುನಾವಣೆಗೆ ಹಂಚಲು ಹಣ ರವಾನಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚರ್ ನಾಮಪತ್ರಿಕೆ ಸಲ್ಲಿಕೆಗೆ ಮುನ್ನ ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಕಾಪುವಿಗೆ ಇಂದು ನಿಗದಿತ ಅವಧಿಗೆ ಮುನ್ನವೇ ಹೆಲಿಕಾಪ್ಟರ್ ಆಗಮಿಸಿದೆ ಇದರಲ್ಲಿ ಬಾರಿ ಹಣ ಇರುವ ಬಗೆ ಮಾಹಿತಿ ಲಭ್ಯವಾಗಿದೆ ಅದರಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಉಡುಪಿ ಎಸ್‌ಪಿ ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಅವರ ಬಗ್ಗೆ ನಮಗೆ ವಿಶ್ವಾಸ ಇದೆ ಹೆಲಿಕಾಪ್ಟರ್ ಪರಿಶೀಲಿಸಿ ಅದರಲ್ಲಿ ಹಣ ಇದ್ದರೆ ಅದನ್ನು ವಶಪಡಿಸಿಕೊಳ್ಳಲಿದ್ದಾರೆ ಎಂದರು
ಕಳೆದ ಬಾರಿ ಸುಳ್ಳು ಪ್ರಚಾರದಿಂದ ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಪ್ರತಿ ಬಾರಿಯೂ ಸುಳ್ಳು ನಡೆಯಲ್ಲ. ಉಡುಪಿ ಜಿಲ್ಲೆಯ ಮತದಾರರು ಪ್ರಭುದ್ಧರಾಗಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ ಜಾತ್ಯತೀತತೆ ಉಳಿಸಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಅವರು ಹೇಳಿದರು
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಂಚನ ಮಾತನಾಡಿ ಈ ಬಾರಿಯ ಚುನಾವಣೆ ನಮಗೆ ದೊಡ್ಡ ಸವಾಲು ಆಗಿದೆ. ಉಡುಪಿ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ವಿ ಎಸ್ ಆಚಾರ್ಯ ನಿಧನದ ಬಳಿಕ ಬಿಜೆಪಿ ರಾಜ್ಯದಲ್ಲಿ ಧೂಳಿಪಟವಾಗಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವರು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎ ಗಫೂರ್ ದಿನಕರ್ ಹೇರೂರು ಅಣ್ಣಯ್ಯ ಸೇರಿಗಾರ್ ಗೀತಾ ವಾಗ್ಳೆ, ವರೊನಿಕ ಕರ್ನೆಲಿಯೊ, ಪ್ರಖ್ಯಾತ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮೊದಲಾದ ಉಪಸಿತರಿದ್ದರು