ಅದಾನಿ ಅವ್ಯವಹಾರ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಈ ವಿಚಾರದಲ್ಲಿ ನರೇಂದ್ರ ಮೋದಿ ಸರಕಾರ ಕಣ್ಣು ಮುಚ್ಚಿ ಕೂರಬಾರದು. ಜನರು ಹೂಡಿಕೆ ಮಾಡಿರುವ ಹಣವನ್ನು ವಾಪಾಸ್ಸು ಕೊಡಬೇಕು ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವರೋನಿಕಾ ಕರ್ನೆಲಿಯೋ ಒತ್ತಾಯಿಸಿದ್ದಾರೆ.
ಅದಾನಿ ವ್ಯವಹಾರದ ವಿರುದ್ಧ ಹಿಂಡನ್ ಬರ್ಗ್ ವರದಿಯ ಸಮಗ್ರ ತನಿಖೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಅಜ್ಜರಕಾಡು ಎಲ್‌ಐಸಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ದೇಶದ ಹಣವನ್ನು ಲೂಟಿ ಮಾಡುವ ಮೂಲಕ ಇವರೆಲ್ಲ ಅರಾಜಕತೆ ಉಂಟು ಮಾಡು ತ್ತಿದ್ದಾರೆ. ನಮ್ಮ ಹೋರಾಟ ಎಲ್‌ಐಸಿ ವಿರುದ್ಧ ಅಲ್ಲ. ಸರಕಾರ ಎಲ್‌ಐಸಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ಬಿ. ನರಸಿಂಹಮೂರ್ತಿ, ಬಿ. ಕುಶಲ್ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಹರೀಶ್ ಕಿಣಿ, ಅಣ್ಣಯ್ಯ ಸೇರಿಗಾರ್, ಕೀರ್ತಿ ಶೆಟ್ಟಿ, ಪ್ರಖ್ಯಾತ ಶೆಟ್ಟಿ, ಗೀತಾ ವಾಗ್ಳೆ, ಜಯ ಕುಮಾರ್, ರೋಷನಿ ಒಲಿವರಾ, ಶಬ್ಬಿರ್ ಅಹ್ಮದ್, ದೀಪಕ್ ಕೋಟ್ಯಾನ್ , ಸೌರಭ್ ಬಲ್ಲಾಳ್ , ಸುರೇಶ್ ಶೆಟ್ಟಿ ಬನ್ನಂಜೆ, ಯತೀಶ್ ಕರ್ಕೇರ, ಹರೀಶ್ ಶೆಟ್ಟಿ ಪಾಂಗಾಳ, ರಮೇಶ್ ಕಾಂಚನ್, ಸಂಜಯ ಆಚರ್ಯ, ಮಹಾಬಲ ಕುಂದರ್ , ದಿನಕರ ಹೇರೂರ್, ಯತೀಸ್ ಕರ್ಕೆರ, ಉದ್ಯಾವರ ನಾಗೇಶ್ ಕುಮಾರ್, ಪ್ರಶಾಂತ ಜತ್ನನ್ನ, ಲೂಯಿಸ್ ಲೋಬೋ, ಎಲ್ಲೂರು ಶಶಿಧರ ಶೆಟ್ಟಿ, ಹಮದ್ , ಗಣೇಶ್ ನೆರ್ಗಿ, ವಿಜಯ ಪೂಜಾರಿ, ಸುಖೇಶ್ ಕುಂದರ್, ಆನಂದ ಪೂಜಾರಿ ಹಾಜರಿದ್ದಗರು.