ಆಫೀಸರ್ ವಾರ್ಡನ್ ಸರ್ವಿಸ್ ಸಿವಿಲ್ ಡಿಫೆನ್ಸ್ ಆಗಿ ಡಾ.ವಿಜಯೇಂದ್ರ ವಸಂತ್ ನೇಮಕ

ಉಡುಪಿ ಜಿಲ್ಲೆಯ ದಂತ ವೈದ್ಯ ವಿಜಯೇಂದ್ರ ವಸಂತ್ ಉಡುಪಿ ಜಿಲ್ಲಾ ಪ್ರಥಮ ಕಮಾಂಡಿಂಗ್ ಆಫೀಸರ್ ವಾರ್ಡನ್ ಸರ್ವಿಸ್ ಸಿವಿಲ್ ಡಿಫೆನ್ಸ್ ಆಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

IMG 20230211 WA0012 Udupi

ಇವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠ ಅಧಿಕಾರಿಗಳ ಶಿಫಾರಸಿನ ಮೇಲೆ ಡೈರೆಕ್ಟರ್ ಜನರಲ್, ಪೊಲೀಸ್ ಕಮಾಂಡೆಂಟ್ ಜನರಲ್ ಹೋಂ ಗಾರ್ಡ್ಸ್, ಡೈರೆಕ್ಟರ್ ಸಿವಿಲ್ ಡಿಫೆನ್ಸ್ ಅಲೋಕ್ ಮೋಹನ್ ನೇಮಕ ಮಾಡಿದ್ದಾರೆ

ಈ ಸಂದರ್ಭದಲ್ಲಿ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಡಾ। ಪ್ರಶಾಂತ್ ಶೆಟ್ಟಿ, ಡೆಪ್ಯುಟಿ ಕಮಾಂಡೆಂಟ್ ಶ್ರೀ ರಮೇಶ್, ಆಫೀಸ್ ಇನ್ ಚಾರ್ಜ್ ಶ್ರೀಮತಿ ಕವಿತಾ, ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಸಂಸ್ಥೆಯ ಮುಖ್ಯಸ್ಥ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ, ಉದ್ಯಮಿ ಶ್ರೀ ಯುವರಾಜ್ ಸಾಲಿಯಾನ್ ಕಮಲಾಭಾಯಿ ಶಾಲಾ ಮುಖ್ಯೋಪಾಧ್ಯಯ ಸುದರ್ಶನ್ ನಾಯಕ್ ಉಪಸ್ಥಿತರಿದ್ದರು

Latest Indian news

Popular Stories