ಉಡುಪಿ:ಜಡಿ ಮಳೆಗೆ ಮನೆಯ‌ ಗೋಡೆ ಕುಸಿತ

ಉಡುಪಿ: ನಿನ್ನೆ ಸುರಿದ ನಿರಂತರ ಜಡಿ ಮಳೆಗೆ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ಸುಮಾ ರಮೇಶ್ ಆಚಾರ್ಯ ಅವರ ಮನೆಗೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆ ಮಾಲಕಿ ಬೆಕ್ಕಿಗೆ ತಿಂಡಿ ಹಾಕಲು ಹೊರ ಬಂದಿದ್ದಾಗ ಈ ಘಟನೆ ನಡೆದಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದಾರೆ.

IMG 20230624 WA0019 Udupi
IMG 20230624 WA0017 Udupi
IMG 20230624 WA0016 Udupi


ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್, ಪಂಚಾಯತ್ ಸದಸ್ಯರಾದ ಜಲೇಶ್ ಶೆಟ್ಟಿ, ಮಾಜಿ ಸದಸ್ಯ ಸುಂದರ ನಾಯಕ್ ಕರ್ವಾಲ್ ಮತ್ತಿತರರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪರಿಹಾರ ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Latest Indian news

Popular Stories