ಉಡುಪಿ: ಅಡಿಕೆ ಮರ ಏರಿದಾಗ ತುಂಡಾಗಿ ಬಿದ್ದು ಬೇಕರಿ ಉದ್ಯಮಿ ಮೃತ್ಯು

ಉಡುಪಿ: ನಗರದಲ್ಲಿ ಅಡಿಕೆ ಕೊಯ್ಲಿಗೆ ಮರವೇರಿದಾಗ ಮರವು ತುಂಡಾಗಿ ಬಿದ್ದು ಬೇಕರಿ ಮಾಲಕ, ಕೃಷಿಕ ಶ್ಯಾಮ್‌ ಅಂಚನ್‌ (59)ಜ.12ರಂದು ಮೃತಪಟ್ಟಿದ್ದಾರೆ.

ಸಿಟಿ ಬಸ್‌ ನಿಲ್ದಾಣ ಸಮೀಪ ಮಠದಬೆಟ್ಟು ಕಂಗಿನ ತೋಟ ಹೌಸ್‌ ನಿವಾಸಿಯಾಗಿರುವ ಇವರು ತಮ್ಮ ಮನೆಯಲ್ಲಿರುವ ಅಡಿಕೆ ಕೊಯ್ಯಲು ಮರವನ್ನು ಹತ್ತಿದ್ದು, ಮರ ತುಂಡಾಗಿದ್ದರಿಂದ ದುರಂತ ಸಂಭವಿಸಿದೆ.

ಗಂಭೀರ ಅಸ್ವಸ್ಥರಾಗಿದ್ದ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಉತ್ತಮ ಕೃಷಿಕರಾಗಿದ್ದ ಇವರು ಪರ್ಕಳದಲ್ಲಿ ಪಾಲುದಾರಿಕೆಯಲ್ಲಿ ಬೇಕರಿ ಉದ್ಯಮವನ್ನು ನಡೆಸುತ್ತಿದ್ದರು.

Latest Indian news

Popular Stories