ಉಡುಪಿ | ಆತ್ಮಹತ್ಯೆಗೆ ಯತ್ನಿಸಿದಾತನ ರಕ್ಷಣೆ

ಉಡುಪಿ,ಸೆ.20; ಉಪ್ಪೂರು ಕುದ್ರುಬೆಟ್ಟು ಇಲ್ಲಿ ಹರಿಯುವ ಸುವರ್ಣ ನದಿಯಲ್ಲಿ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ ಹೊರರಾಜ್ಯದ ಯುವಕನನ್ನು ಸ್ಥಳಿಯರು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ. ರಕ್ಷಿಸಲ್ಪಟ್ಟ ಯುವಕ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸುಮನ್ (40ವ) ಎಂದು ಶಂಕಿಸಲಾಗಿದೆ. ಯುವಕನ ಸಂಬಂಧಿಕರು ಇದ್ದಲ್ಲಿ ಕಾರ್ಕಳದ ಹೊಸಬೆಳಕು ಆಶ್ರಮವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಕಾರ್ಯಚರಣೆಯಲ್ಲಿ ಲೋಕೇಶ್ ಮೆಂಡನ್, ಸುಜಿ ಮೆಂಡನ್, ಅರವಿಂದ ಮೆಂಡನ್, ಉಮೇಶ ಜತ್ತನ್ನ, ಪ್ರದೀಪ ಮೆಂಡನ್, ಸುರೇಶ್ ಬಿ. ಆರ್ ಭಾಗಿಯಾಗಿದ್ದರು.

ಯುವಕ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಕೃತ್ಯ ನಡೆಸಲು ಮುಂದಾಗಿರುವುದು ಕಂಡುಬಂದಿದೆ. ರಕ್ಷಿಸಲ್ಪಟ್ಟ ಯುವಕನ ಮನವೊಲಿಸಿದ ಸಮಾಜಸೇವಕ ಒಳಕಾಡುವರು ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಒದಗಿಸಿದ್ದಾರೆ. ಆಶ್ರಮದ ಸಂಚಾಲಕರಾದ ವಿನಯಚಂದ್ರ ಸಾಸ್ತಾನ, ತನುಲಾ ತರುಣ್, ಗೌರೀಶ್ ಅವರು ಅಸಹಾಯಕ ಯುವಕನಿಗೆ ಆಶ್ರಯ ನೀಡಿ ನೆರವಾಗಿದ್ದಾರೆ.

Latest Indian news

Popular Stories