ಉಡುಪಿ: ನಗರದ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾಪು ಮೂಲದ ದಂಪತಿ ಪುತ್ರಿ ಮಂಗಳಾದೇವಿ(11) ಆತ್ಮಹತ್ಯೆ ಮಾಡಿಕೊಂಡವರು. ಈಕೆ ಕಾಪುವಿನ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಉಡುಪಿ ನಗರ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆಕೆ ಉಪಯೋಗಿಸುತ್ತಿದ್ದ ಟ್ಯಾಬ್ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ.
ಮಾಹಿತಿಯ ಪ್ರಕಾರ ಯೂಟ್ಯೂಬ್ ನೋಡಿ ಸ್ನಾನ ಗೃಹದಲ್ಲಿ ಕೃತ್ಯ ಎಸಗಿಕೊಂಡಿದ್ದಾಳೆ.