ಉಡುಪಿ: ಎರಡು ಅನಾಥ ಶವಗಳ ಅಂತ್ಯ ಸಂಸ್ಕಾರ

ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಅಸ್ವಸ್ಥ ಗೊಂಡು ಬಿದ್ದಿದ್ದ ಗಾಯಾಳು ಮತ್ತು ರಾಜಾಂಗಣದಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಸುಮಾರು ಒಂದು ತಿಂಗಳ ಹಿಂದೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು .ಚೀಕ್ಸ್ಥೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದರು.

ಅವರ ವೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿತ್ತು.ಮಾಧ್ಯಮದ ಮೂಲಕ ತಿಳಿಯ ಪಡಿಸಲಾಗಿತ್ತು.ವಾರಾಸು ಬಾರದೆ ಇದ್ದ ಕಾರಣ ವೃತ ದೇಹವನ್ನು ಹಿಂದೂ ರುದ್ರಭೂಮಿ ಬೀಡಿನ ಗುಡ್ಡೆಯಲ್ಲಿ ವಿಧಿ ವಿಧಾನ ಮೂಲಕ ಪೊಲೀಸ್ ಮತ್ತು ಒಳಕಾಡು ಅವರ ನೇತ್ರತ್ವದಲ್ಲಿ ದಫನ ಮಾಡಲಾಯಿತು.

ನಗರ ಠಾಣೆಯ ಪೊಲೀಸ್ ಎ ಎಸ್ ಐ ಅರುಣ್ ಹಂಗಾರಕಟ್ಟೆ, ಹೇಡ್ ಕಾನ್ಸ್ಟೇಬಲ್ ಮಾಳ ಹರೀಶ್,ಜಾಸ್ಮ ಕಾನೂನು ಪ್ರಕ್ರಿಯೆ ನಡೆಸಿದರು,ಹೊಸಬೆಳಕು ಆಶ್ರಮದ ಸಂಚಾಲಕಿ ತಾನುಲಾ ತರುಣ್, ಫ್ಲವರ್ ವಿಷ್ಣು ,ವಿಕಾಸ್ ಶೆಟ್ಟಿ,ಪ್ರದೀಪ್ ,ಅಣ್ಣಪ್ಪ ಪೂಜಾರಿ ಕಾರಂಬಳ್ಳಿ, ನಗರ ಸಭೆ, ಜಿಲ್ಲಾಸ್ಪತ್ರೆ ಇವರು ಸಹಕರಿಸಿದರು.

Latest Indian news

Popular Stories