ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಅವರು ಅಫಿದಾವಿತ್‌ನಲಿ ತನ್ನ ಆದಾಯ, ಆಸ್ತಿಪಾಸ್ತಿಗಳ
ವಿವರಗಳನ್ನು ಸಲ್ಲಿಸಿದ್ದಾರೆ.
ಅವರ ಅಫಿದಾವಿತ್‌ನಲ್ಲಿ ತಿಳಿಸಿರುವ ವಿವರಗಳಂತೆ ಪ್ರಸಾದ್ ರಾಜ್ ಕಾಂಚನ್ ಒಟ್ಟು ಆದಾಯ 33.64 ಕೋಟಿ ರೂ.ಗಳಾಗಿವೆ. ಇದರಲ್ಲಿ ಅವರ ಚರಾಸ್ಥಿ ಮೌಲ್ಯ 24,08,62,493 ರೂ.ಗಳಾದರೆ ಅವರಲ್ಲಿರುವ ಸ್ಥಿರಾಸ್ಥಿಗಳ ಒಟ್ಟು ಮೌಲ್ಯ 9,56,38,000 ರೂ.ಗಳಾಗಿವೆ.
ಇದರೊಂದಿಗೆ ಕಾಂಚನ್ ಅವರು ಒಟ್ಟು 6,16,82,509 ರೂ. ಸಾಲ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ. ಇದೇ ವೇಳೆ ಕಾಂಚನ್ ಅವರ ಪತ್ನಿಯ ಒಟ್ಟು ಆದಾಯ 28.64 ಕೋಟಿ ರೂ.ಗಳಾಗಿವೆ. ಇವುಗಳಲ್ಲಿ ಅವರ ಚರಾಸ್ಥಿಯ ಮೌಲ್ಯ 24.68 ಕೋಟಿ ರೂ.ಗಳಾದರೆ,
ಸ್ಥಿರಾಸ್ಥಿಯ ಮೌಲ್ಯ 3.96 ಕೋಟಿ ರೂ.ಗಳಾಗಿವೆ. ಕಾಂಚನ್ ಅವರು 3 ಲಕ್ಷ ರೂ. ಹಾಗೂ ಪತ್ನಿ 2 ಲಕ್ಷ ರೂ. ನಗದು ಹೊಂದಿದ್ದಾರೆ.
ಕಾಂಚನ್ ಅವರ ವಿವಿಧ ಬ್ಯಾಂಕ್ ಖಾತೆಗಳಲ್ಲಿ 6,74,34,754 ರೂ. ಠೇವಣಿ ಇದೆ. ಹೆಂಡತಿ ಖಾತೆಯಲ್ಲಿ 1,66,61,058 ರೂ. ಹಣವಿದೆ. ಶೇರು ಮಾರುಕಟ್ಟೆ, ಬಾಂಡ್, ಮ್ಯೂಚುವಲ್ ಫಂಡ್‌ಗಳಲ್ಲಿ 3,64,78,365 ರೂ. ಹೂಡಿಕೆ ಮಾಡಿದ್ದಾರೆ. 59,90,936 ರೂ. ಮೌಲ್ಯದ ಉಳಿತಾಯ ಪ್ರಮಾಣಪತ್ರ, ವಿಮೆ ಹೊಂದಿದ್ದಾರೆ. ಕಾಂಚನ್ ಬಳಿ 11.23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 47,40,884 ರೂ. ಮೌಲ್ಯದ ವಾಹನ, ಹೆಂಡತಿ ಬಳಿ 44.92 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ ಎಂದು ಅಫಿದಾವಿತ್‌ನಲ್ಲಿ ತಿಳಿಸಲಾಗಿದೆ.