ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ 2023-2024 ನೇ ಅವಧಿಯ ಅಧ್ಯಕ್ಷರಾಗಿ ಮುಹಮ್ಮದ್ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಇದ್ರೀಸ್ ಹೂಡೆ ಆಯ್ಕೆ

ಉಡುಪಿ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ 2023-2024 ನೇ ಅವಧಿ ಯ ಅಧ್ಯಕ್ಷರಾಗಿ ಮುಹಮ್ಮದ್ ಯಾಸೀನ್ ಮಲ್ಪೆ ಆಯ್ಕೆಯಾಗಿದ್ದಾರೆ. ಒಕ್ಕೂಟದ ದ್ವೈವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಮುಂದಿನ 2 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಹಿಂದೆ 2008 ರಿಂದ 2010ರ ವರೆಗೆ ಎರಡು ವರ್ಷಗಳ ಅವಧಿಗೆ ಮತ್ತು 1016 ರಿಂದ 2020 ರವರೆಗೆ ನಾಲ್ಕು ವರ್ಷಗಳ ಅವಧಿಗೂ ಅವರು ಅಧ್ಯಕ್ಷರಾಗಿದ್ದರು.

ಇದೇ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಇತರ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಹಾಜಿ ಅಬ್ದುಲ್ಲಾ ಸಾಹೇಬ್ ಪರ್ಕಳ , ಹಿರಿಯ ಉಪಾಧ್ಯಕ್ಷರಾಗಿ ಅಬೂಬಕರ್ ನೆಜಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇದ್ರೀಸ್ ಹೂಡೆ ಅವರನ್ನು ನೇಮಿಸಲಾಯಿತು.

ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮೌಲಾ ಉಡುಪಿ, ಮುಹಮ್ಮದ್ ಇರ್ಷಾದ್ ನೇಜಾರ್, ಮುಹಮ್ಮದ್ ರಫೀಕ್ ಕುಂದಾಪುರ, ಖಾಲಿದ್ ಮಣಿಪುರ,ಸಲಾಹುದ್ದೀನ್ ಅಬ್ದುಲ್ಲಾ ಹೂಡೆ ಮತ್ತು ಅಬ್ದುಲ್ ರಹಮಾನ್ ಕನ್ನಂಗಾರ್ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹುಸೈನ್ ಕಟಪಾಡಿ , ಕೋಶಾಧಿಕಾರಿಯಾಗಿ ಸಯ್ಯದ್ ಫರೀದ್ ಉಡುಪಿ ಮತ್ತು
ಸಂಘಟನಾ ಕಾರ್ಯದರ್ಶಿಯಾಗಿ ಎಸ್. ಕೆ. ಇಕ್ಬಾಲ್ ಕಟಪಾಡಿ ಆರಿಸಲ್ಪಟ್ಟರು.

ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳಿಗೆ ಮೇಲ್ವಿಚಾರಕರನ್ನು ನೇಮಿಸಲಾಯಿತು. ನಿಕಟಪೂರ್ವ ಅಧ್ಯಕ್ಷರಾದ ಇಬ್ರಾಹಿಮ್ ಸಾಹೇಬ್ ಕೋಟ ಅವರನ್ನು ಬ್ರಹ್ಮಾವರ ತಾಲೂಕಿನ ಮೇಲ್ವಿಚಾರಕರಾಗಿ ನೇಮಿಸಲಾಯಿತು. ಕಾರ್ಕಳ ತಾಲೂಕು ಮೇಲ್ವಿಚಾರಕರಾಗಿ ಅಶ್ಫಾಕ್ ಅಹ್ಮದ್ ಕಾರ್ಕಳ, ಕಾಪು ತಾಲೂಕಿಗೆ ಶಭಿ ಅಹ್ಮದ್ ಖಾಝಿ, ಉಡುಪಿ ತಾಲೂಕಿಗೆ ಟಿ. ಎಮ್. ಝಫ್ರುಲ್ಲಾ ನೇಜಾರ್, ಕುಂದಾಪುರ ತಾಲೂಕಿಗೆ ಶಾಭಾನ್ ಹಂಗ್ಳೂರು ಹಾಗೂ ಬೈಂದೂರು ತಾಲೂಕು ಉಸ್ತುವಾರರಾಗಿ ಹಾಸನ್ ಮಾವಾಡ್ ಅವರನ್ನು ನೇಮಿಸಲಾಯಿತು.

ಮಾಧ್ಯಮ ವಕ್ತಾರರಾಗಿ ಎಂ. ಪಿ. ಮೊಯ್ದಿನಬ್ಬ ಮೂಳೂರು, ಸಹ ವಕ್ತಾರರಾಗಿ ಯಾಸೀನ್ ಕೊಡಿ ಬೆಂಗ್ರೆ, ಮಾಧ್ಯಮ ಮತ್ತು ವರದಿ ಗಾರಿಕೆ ಸಂಚಾಲಕರಾಗಿ ಅನ್ವರ್ ಅಲಿ ಕಾಪು, ಸಹಬಾಳ್ವೆ ಸಂಚಾಲಕರಾಗಿ ಅಬ್ದುಲ್ ಅಝೀಝ್ ಉದ್ಯಾವರ , ಉಲಮಾ ಸಂಚಾಲಕರಾಗಿ ಮೌಲಾನಾ ಝಮೀರ್ ಅಹಮದ್ ರಶಾದಿ,
ಶೈಕ್ಷಣಿಕ ಸಮಿತಿ ಸಂಚಾಲಕರಾಗಿ ಶೇಖ್ ಅಬ್ದುಲ್ಲತೀಫ್ ಮದನಿ ಹಾಗೂ ಕಾನೂನು ವ್ಯವಹಾರಗಳ ಸಂಚಾಲಕರಾಗಿ ಹುಸೈನ್ ಕೊಡಿಬೆಂಗ್ರೆ ಆಯ್ಕೆಯಾದರು.

ಜತೆ ಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ಗುಜ್ಜರಬೆಟ್ಟು, ಸಹ ಕೋಶಾಧಿಕಾರಿಯಾಗಿ ಉಮರ್ ವಿ. ಎಸ್. ಉಡುಪಿ ಮತ್ತು
ಸಹ ಸಂಘಟನಾ ಸಂಚಾಲಕರಾಗಿ ಇಕ್ಬಾಲ್ ಮನ್ನಾ ನಾಯರಕೆರೆ ನೇಮಕಗೊಂಡರು.

ಜಿಲ್ಲಾ ಸಮಿತಿ ಸದಸ್ಯರಾಗಿ ಖತೀಬ್ ಅಬ್ದುಲ್ ರಶೀದ್ ಮಲ್ಪೆ,
ಅಬ್ದುಲ್ ಅಝೀಝ್ ಮಣಿಪಾಲ, ಅಬ್ದುಲ್ ಅಝೀಝ್ ಆದಿಉಡುಪಿ, ಬಿ.ಎಮ್.ಮೊಯಿದ್ದೀನ್ ಕಟಪಾಡಿ, ಅಮೀರ್ ಹಂಝ ಕಾಪು,ಮುಹಮ್ಮದ್ ಇಕ್ಬಾಲ್ ಕಾಪು, ಮುಹಮ್ಮದ್ ಶರೀಫ್ ಕಾರ್ಕಳ, ಮುಹಮ್ಮದ್ ಗೌಸ್ ಮಿಯಾರು, ಸಮದ್ ಖಾನ್ ಕಾರ್ಕಳ,
ನಾಸೀರ್ ಶೇಖ್ ಬೈಲೂರು,ತಾಜುದ್ದೀನ್ ಇಬ್ರಾಹಿಮ್ ಬ್ರಹ್ಮಾವರ, ಮುಹಮ್ಮದ್ ಆಸಿಫ್ ಬ್ರಹ್ಮಾವರ,ಅಸ್ಲಮ್ ಹೈಕಾಡಿ,
ಹಾರೂನ್ ರಶೀದ್ ಬ್ರಹ್ಮಾವರ, ಜಮಾಲ್ ಹೈದರ್ ಬ್ರಹ್ಮಾವರ,
ದಸ್ತಗೀರ್ ಕಂಡ್ಲೂರು,ರಿಯಾಝ್ ಕೋಡಿ ಕುಂದಾಪುರ, ಅಬೂ ಮುಹಮ್ಮದ್ ಮುಜಾವರ್ ಕುಂದಾಪುರ, ಮನ್ಸೂರ್ ಇಬ್ರಾಹಿಂ ನಾವುಂದ, ಮುಸ್ತಫಾ ಬಡಕೆರೆ, ಮುಹಮ್ಮದ್ ಅಶ್ರಫ್ ನನ್ನು, ಅಮೀನ್ ಗೋಳಿಹೊಳೆ ಆಯ್ಕೆಯಾದರು. ಮೌಲಾನಾ ಮುಸ್ತಫಾ ಸಅದಿ ಮೂಳೂರು, ಹನೀಫ್ ಗುಲ್ವಾಡಿ, ಫಝೀಲ್ ಆದಿಉಡುಪಿ ಮತ್ತು ಮುಹಮ್ಮದ್ ರಿಹಾನ್ ತ್ರಾಸಿ ಅವರನ್ನು ಜಿಲ್ಲಾ ಸಮಿತಿಗೆ ಸಹಕರಣ ಮಾಡಲಾಯಿತು.

ನಿಕಟಪೂರ್ವ ಅಧ್ಯಕ್ಷರಾದ ಇಬ್ರಾಹಿಮ್ ಕೋಟ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಇಬ್ರಾಹೀಮ್ ಸಾಹೇಬ್ ಕೋಟಾ ಪ್ರಸ್ತಾವಿಕ ಭಾಷಣ ಮಾಡಿದರು.
ಇಸ್ಮಾಯಿಲ್ ಹುಸೈನ್ ಕಟಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories